ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಆಶ್ರಯದಲ್ಲಿ 22ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಮತ್ತು ಮರ್‌ಹೂಮ್ ಡಾ ಕೆ.ಎಂ ಶಾಹ್ ಮುಸ್ಲಿಯಾರ್ ಅವರ 7ನೇ ವರ್ಷದ ಅನುಸ್ಮರಣೆಯು ವಿಜೃಂಭಣೆಯಿಂದ ಎ.30ರಂದು ನಡೆಯಿತು. ದಿಕ್ರ್ ಸ್ವಲಾತ್‌ನ ನೇತೃತ್ವವನ್ನು ಅಸೈಯದ್ ಅಲ್ ಹಾಜ್ ಎನ್ ಪಿ ಯಂ ಝೈನುಲ್ ಆಬಿದ್ದೀನ್ ತಂಙಳ್ ವಹಿಸಿ ದುವಾಃ ಆರ್ಶೀವಚನ ಮಾಡಿದರು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಆಸೀಫ್ ಆಝ್‌ಹರಿ ಸಮಾರಂಭವನ್ನು ಉದ್ಘಾಟಿಸಿದರು. ಪೇರಡ್ಕ ಮುಹೀದ್ಧೀನ್ ಜಮಾ ಮಸೀದಿ ಖತೀಬರಾದ ಅಹಮ್ಮದ್ ನೈಈಂ ಫೈಝಿ ಅನುಸ್ಮರಣಾ ಭಾಷಣ ಮಾಡಿದರು. ಬಹು ಮಹಮ್ಮದ್ ಆಸಿಫ್ ಅಲ್ ಅಝ್ ಹರಿ ಕೊಕ್ಕೆಜಾಲ್ ರವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಂಪುಟ ದರ್ಜೆ) ಟಿ ಎಂ ಶಹೀದ್ ತೆಕ್ಕಿಲ್ ಭಾಗವಹಿಸಿದ್ದರು. ಅರಂತೋಡು ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ದಿಕ್ರ್ ಸ್ವಲಾತ್ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ಬಿಳಿಯಾರು ಮಸೀದಿ ಇಮಾಮ್ ಸಂಶುದ್ದೀನ್ ಪೈಝಿ, ಸದರ್ ರೌಫ್ ಅಝ್ ಹರಿ , ಮದರಸ ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರುಗಳಾದ ಹಾಜಿ ಕೆ ಎಂ ಮಹಮ್ಮದ್, ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಅನ್ವರ್ ಹುದಾ ಯಂಗ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್, ದುಬೈ ಸಮಿತಿ ಅಧ್ಯಕ್ಷ ಜಿ ಬದುರುದ್ದೀನ್ ಪಠೇಲ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್ ಎಸ್. ಇ, ಅನಿವಾಸಿ ಉದ್ಯಮಿ ಸೈಫುಧೀನ್ ಪಟೇಲ್ ದುಬೈ, ಜಮಾತ್ ಕಾರ್ಯದರ್ಶಿ ಕೆ ಎಂ ಮೂಸಾನ್, ಹಮೀದ್ ಹಾಜಿ ಸುಳ್ಯ, ಹಾಜಿ ಅಹಮದ್ ಸುಪ್ರೀಂ ಮದರಸ ಸಂಚಾಲಕ ಅಮೀರ್ ಕುಕುಂಬಳ, ದಿಕ್ರ್ ಸ್ವಲಾತ್ ಕಾರ್ಯದರ್ಶಿ ಸಂಶುದ್ದೀನ್ ಕೆ ಎ ಯು, ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ, ಸಂಶುದ್ದೀನ್ ಕ್ಯೂರ್ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಅನ್ನದಾನ ನಡೆಯಿತು.
ಅರಂತೋಡು ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆದ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಹಾಗೂ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣೆ



















































