ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಗಲು ತೀವ್ರ ಬಿಸಿಲು ಮತ್ತು ಸೆಖೆ ಇರಲಿದ್ದರೂ, ಸಂಜೆ ಹಾಗೂ ರಾತ್ರಿ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡದ ಗಡಿ ಭಾಗಗಳಲ್ಲೂ ಮಳೆ ನಿರೀಕ್ಷಿಸಲಾಗಿದೆ.
ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಉತ್ತಮ ಮಳೆ ಮುಂದುವರಿಯಲಿದ್ದು, ಕಂಗಾಲಾಗಿದ್ದ ಜನರಿಗೆ ಬಿಸಿಲಿನಿಂದ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.
ದಕ್ಷಿಣ ಕನ್ನಡ,ಉಡುಪಿ,ಕಾಸರಗೋಡು ಭಾಗದಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ



















































