May 2, 2026

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ. ರೇಣುಕಾ ಪ್ರಸಾದ್ ರಿಂದ ಧನಸಹಾಯ ಹಸ್ತಾಂತರ

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಹಾಗೂ ಎ.ಒ.ಎಲ್.ಇ.ಬಿ ಕಮಿಟಿಯ ಚೆರ್ಮೆನ್ ಡಾ. ರೇಣುಕಾ ಪ್ರಸಾದ್ ಕುರುಂಜಿ ಅವರು ನೀಡಿದ ಧನಸಹಾಯದ ಚೆಕ್ ನ್ನು ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆಯವರು ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡರಿಗೆ ಮೇ. 2 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎ. ಒ. ಎಲ್. ಇ. ಬಿ ಕಮಿಟಿ ಯ ಉದ್ಯೋಗಿಗಳಾದ ಪ್ರಸನ್ನ ಕಲ್ಲಾಜೆ, ಪದ್ಮನಾಭ ಕಾನಾವುಜಾಲು, ಪ್ರಮುಖರಾದ ಸುಪ್ರೀತ್ ಮೋoಟಡ್ಕ, ಸತ್ಯಶಾಂತಿ ತ್ಯಾಗಮೂರ್ತಿ […]

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ. ರೇಣುಕಾ ಪ್ರಸಾದ್ ರಿಂದ ಧನಸಹಾಯ ಹಸ್ತಾಂತರ Read More »

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಮೇ. 2ರಂದು ಪೂರ್ವಹ್ನ 8 ರಿಂದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ 12 ಕಾಯಿ ಗಣಪತಿ ಹವನ,ಆಶ್ಲೇಷಾಬಲಿ, ಶತರುದ್ರಾಭಿಷೇಕ, ಕಲಶಅಭಿಷೇಕ ಹಾಗೂ ಪರಿವಾರ ದೈವಗಳಿಗೆ ಹಾಗೂ ನಾಗದೇವರಿಗೆ ಕಲಶ ಅಭಿಷೇಕ,ತಂಬಿಲ ಸೇವೆಗಳು ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು.ಸದಸ್ಯರಾದ ಸಂತೋಷ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ,ಮಾಯಿಲಪ್ಪ, ಎಣ್ಮೂರು,ಧರ್ಮಪಾಲ ಮರಕಡ,ಪವಿತ್ರ ,ಮಾಲೆಟ್ಟಿ, ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ Read More »

ಶ್ರದ್ಧಾ ಭಕ್ತಿಯಿಂದ ನಡೆದ ಅಡ್ತಲೆ ಕುಟುಂಬಸ್ಥರ ಧರ್ಮ ನಡಾವಳಿ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬಸ್ಥರ ಆದಿಮನೆಯಲ್ಲಿ ಧರ್ಮ ನಡಾವಳಿ ಏ.30 ಮತ್ತು ಮೇ.1ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಏ.3೦ನೇ ಗುರುವಾರ ಪೂರ್ವಾಹ್ನ ಗಂಟೆ 10-೦೦ರಿಂದಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಿತು.ಸಂಜೆ ಗಂಟೆ 6-00ಕ್ಕೆಶ್ರೀ ದೈವಗಳ ಭಂಡಾರ ತೆಗೆಯಲಾಯಿತು‌. ರಾತ್ರಿ ಗಂಟೆ 8-00ರ ನಂತರ ಉಪದೈವಗಳ ನೇಮ ನಡೆಯಿತು. ಮೇ 1ನೇ ಶುಕ್ರವಾರ ಶ್ರೀ ಧರ್ಮದೈವದ ನಡಾವಳಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆರಾತ್ರಿ ಗಂಟೆ 6-00ರಿಂದ ಉಪದೈವಗಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗಿರೀಶ್ ಹೆಚ್,ಕುಟುಂಬದ ಹಿರಿಯರಾದ ಹೊನ್ನಪ್ಪ

ಶ್ರದ್ಧಾ ಭಕ್ತಿಯಿಂದ ನಡೆದ ಅಡ್ತಲೆ ಕುಟುಂಬಸ್ಥರ ಧರ್ಮ ನಡಾವಳಿ Read More »

error: Content is protected !!
Scroll to Top