ಅರಂತೋಡು ಗ್ರಾಮದ ಅಡ್ತಲೆ ಕುಟುಂಬಸ್ಥರ ಆದಿಮನೆಯಲ್ಲಿ ಧರ್ಮ ನಡಾವಳಿ ಏ.30 ಮತ್ತು ಮೇ.1ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಏ.3೦ನೇ ಗುರುವಾರ ಪೂರ್ವಾಹ್ನ ಗಂಟೆ 10-೦೦ರಿಂದ
ಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಿತು.
ಸಂಜೆ ಗಂಟೆ 6-00ಕ್ಕೆ
ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಗಂಟೆ 8-00ರ ನಂತರ ಉಪದೈವಗಳ ನೇಮ ನಡೆಯಿತು. ಮೇ 1ನೇ ಶುಕ್ರವಾರ ಶ್ರೀ ಧರ್ಮದೈವದ ನಡಾವಳಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ
ರಾತ್ರಿ ಗಂಟೆ 6-00ರಿಂದ ಉಪದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗಿರೀಶ್ ಹೆಚ್,ಕುಟುಂಬದ ಹಿರಿಯರಾದ ಹೊನ್ನಪ್ಪ ಮಾಸ್ತರ್ ಅಡ್ತಲೆ,ಆದಿಮನೆಯ ಹಿರಿಯರಾದ ಜಗದೀಶ ಅಡ್ತಲೆ,ಕಾರ್ಯದರ್ಶಿ ಕೇಶವ ಅಡ್ತಲೆ,ಕುಟುಂಬಸ್ಥರು,ನೆಂಟರಿಷ್ಡರು,ಊರಿನವರು,ಬಂಧು ಮಿತ್ರರು ಉಪಸ್ಥಿತರಿದ್ದರು.
ಶ್ರದ್ಧಾ ಭಕ್ತಿಯಿಂದ ನಡೆದ ಅಡ್ತಲೆ ಕುಟುಂಬಸ್ಥರ ಧರ್ಮ ನಡಾವಳಿ





























































