ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಹಾಗೂ ಎ.ಒ.ಎಲ್.ಇ.ಬಿ ಕಮಿಟಿಯ ಚೆರ್ಮೆನ್ ಡಾ. ರೇಣುಕಾ ಪ್ರಸಾದ್ ಕುರುಂಜಿ ಅವರು ನೀಡಿದ ಧನಸಹಾಯದ ಚೆಕ್ ನ್ನು ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆಯವರು ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡರಿಗೆ ಮೇ. 2 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎ. ಒ. ಎಲ್. ಇ. ಬಿ ಕಮಿಟಿ ಯ ಉದ್ಯೋಗಿಗಳಾದ ಪ್ರಸನ್ನ ಕಲ್ಲಾಜೆ, ಪದ್ಮನಾಭ ಕಾನಾವುಜಾಲು, ಪ್ರಮುಖರಾದ ಸುಪ್ರೀತ್ ಮೋoಟಡ್ಕ, ಸತ್ಯಶಾಂತಿ ತ್ಯಾಗಮೂರ್ತಿ ಉಪಸ್ಥಿತರಿದ್ದರು.



















































