June 2026

ಸುಳ್ಯ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ,ತರಬೇತಿ ಕಾರ್ಯಗಾರ ಉದ್ಘಾಟನೆ

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿಯವರ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕು ಆಡಳಿತ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಯವರಿಗೆ,ಮತಗಟ್ಟೆ ಮಟ್ಟದ ಏಜೆಂಟ್ ಗಳಿಗೆ ತರಬೇತಿ ಕಾರ್ಯಗಾರ ಸುಳ್ಯದ ಬಂಟರ ಭವನದಲ್ಲಿ ಜೂ.17ರಂದು ಆರಂಭಗೊಂಡಿದೆ.ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ಕಾರ್ಯಗಾರ ಉದ್ಘಾಟಿಸಿದರು.ಮತದಾರರ ಉಪನೋಂದಣಾಧಿಕಾರಿ ಮತ್ತು ಸುಳ್ಯ ತಹಶೀಲ್ದಾರ್ ಮಂಜುಳ,ಉಪ ತಹಶೀಲ್ದಾರ್ ಚಂದ್ರಕಾಂತ,ಮಾಸ್ಟರ್ ತರಬೇತಿದಾರರಾದ ಸತೀಶ್ ಕುಮಾರ್ ಕೊಂಗೈಜೆ,ಲಿಂಗಪ್ಪ ಬೆಳ್ಳಾರೆ ತರಬೇತಿ ನೀಡಿದರು‌.

ಸುಳ್ಯ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ,ತರಬೇತಿ ಕಾರ್ಯಗಾರ ಉದ್ಘಾಟನೆ Read More »

ದೇವರ ಕೊಲ್ಲಿಯಲ್ಲಿ ಬೈಕ್ ಅಪಘಾತ, ಪೋಲಿಸ್ ಹೋಮ್ ಗಾರ್ಡ್ ಗೆ ಗಾಯ

ಕೊಡಗಿನ ದೇವರಕೊಲ್ಲಿ ಸಮೀಪ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಪೊಲೀಸ್ ಸಿಬ್ಬಂದಿ ವಿಖ್ಯಾತ್ ಹಾಗೂ ಹೋಮ್ ಗಾರ್ಡ್ ಗಿರೀಧರ ಗಾಯಗೊಂಡ ಘಟನೆ ಜೂ.17ರಂದು ವರದಿಯಾಗಿದೆ.ಗಾಯಳುಗಳು ಕಲ್ಲುಗುಂಡಿ ಹೊರ ಠಾಣೆಯ ಪೋಲಿಸ್ ಹಾಗೂ ಹೋಮ್ ಗಾರ್ಡ್ ಎಂದು ತಿಳಿದು ಬಂದಿದೆ.ಮಡಿಕೇರಿಯಿಂದ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ದೇವರ ಕೊಲ್ಲಿಯಲ್ಲಿ ಬೈಕ್ ಅಪಘಾತ, ಪೋಲಿಸ್ ಹೋಮ್ ಗಾರ್ಡ್ ಗೆ ಗಾಯ Read More »

ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ ಕೃಷ್ಣಪ್ಪ ರಂಗಮ್ಮ ಎಜುಕೇಷನ್‌ ಟ್ರಸ್ಟ್, 2025-26ನೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿನಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿರುವ ಒಕ್ಕಲಿಗ ಸಮುದಾಯ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿ, ಪಾಲಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾಭ್ಯಾಸದ ಶಾಲೆ/ಕಾಲೇಜಿನ ಹೆಸರು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯ ದೃಢೀಕೃತ ನಕಲು ಪ್ರತಿ, ಬ್ಯಾಂಕ್ ಖಾತೆ ವಿವರ ಒಳಗೊಂಡ ಜೆರಾಕ್ಸ್ ಪ್ರತಿಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಪ್ರತಿಭಾ ಪುರಸ್ಕಾರ ವಿಭಾಗ,

ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ Read More »

ಸುಳ್ಯ : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ,ಆರೋಪಿಯ ಬಂಧನ

ಸುಳ್ಯದ ಗಾಂಧಿನಗರದಲ್ಲಿ ವ್ಯಕ್ತಿ ಓರ್ವರು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿದ್ದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿ ಮೂಲತಃ ಗದಗ ತಾಲೂಕಿನ ಶಿರಟ್ಟಿ ಗ್ರಾಮದ ನಿವಾಸಿ ವಿನಾಯಕ ಎಂದು ಗುರುತಿಸಲಾಗಿದೆ.ಆತ ಬಾಲಕಿ ಮಾತ್ರ ಮನೆಯಲ್ಲಿ ಇರುವ ಸಂದರ್ಭದಲ್ಲಿ ಮನೆಗೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ಸುಳ್ಯ : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ,ಆರೋಪಿಯ ಬಂಧನ Read More »

ಜೂ.21; ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಒಂದು ದಿನ ಕೂಡಿ ಆಡೋಣ ವಿವಿಧ ಕ್ರೀಡಾ ಸ್ಪರ್ಧೆಗಳು

ಅರಂಬೂರು ಘಟಕ ಗೌಡ ಸಮಿತಿ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಇದರ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಒಂದು ದಿನ ಕೂಡಿ ಆಡೋಣ ಕ್ರೀಡಾ ಸ್ಪರ್ಧೆಗಳು ಜೂ.21ರಂದು ಪಡ್ಪು ಪದ್ಮಯ್ಯನವರ ಗದ್ದೆಯಲ್ಲಿ ನಡೆಯಲಿದೆ.ಬೆಳಿಗ್ಗೆ 9.30ರಿಂದ ಸ್ಪರ್ಧೆ ಆರಂಭವಾಗಲಿದ್ದು ಸ್ಪರ್ಧೆಯನ್ನು ಪ್ರಗತಿಪರ ಕೃಷಿಕರಾದ ಅಪ್ಪಯ್ಯ ಗೌಡ ಪಡ್ಪು ಉದ್ಘಾಟಿಸಲಿದ್ದಾರೆ. ಸ್ಪರ್ಧೆಯ ವಿವರ ಈ ಕೆಳಗಿನಂತಿದೆ.ಕೆಸರುಗದ್ದೆ ಓಟ (ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ)ನಿಧಿ ಶೋಧ (ಸಾರ್ವಜನಿಕರಿಗೆ)ಮಡಿಕೆ ಒಡೆಯುವುದು (ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ,ಹಾಳೆಯಲ್ಲಿ ಕುಳಿತು ಎಳೆಯುವುದು (ದಂಪತಿಗಳಿಗೆ)ನಿಂಬೆಹಣ್ಣು ಓಟ (5

ಜೂ.21; ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಒಂದು ದಿನ ಕೂಡಿ ಆಡೋಣ ವಿವಿಧ ಕ್ರೀಡಾ ಸ್ಪರ್ಧೆಗಳು Read More »

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ತಂದೆಯರ ದಿನಾಚರಣೆ

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ತಂದೆಯರ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಂತೋಷದಿಂದ ಆಚರಿಸಲಾಯಿತು. ಮಕ್ಕಳ ಜೀವನದಲ್ಲಿ ತಂದೆಯರ ಮಹತ್ವ, ಅವರ ಪ್ರೀತಿ, ತ್ಯಾಗ ಹಾಗೂ ಮಾರ್ಗದರ್ಶನವನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ತಂದೆಯರಿಗಾಗಿ ಹಾಡು, ನೃತ್ಯ, ಅಭಿನಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಂದೆ ಮತ್ತು ಮಕ್ಕಳಿಗಾಗಿ ವಿಶೇಷ ಆಟಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಎಲ್ಲ ತಂದೆಯರು ಉತ್ಸಾಹದಿಂದ ಭಾಗವಹಿಸಿ ಮಕ್ಕಳೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆದರು.‘ಮಗುವಿಗೊಂದು ಪುಸ್ತಕ’

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ತಂದೆಯರ ದಿನಾಚರಣೆ Read More »

ಜೇಸಿಐ ಸುಳ್ಯ ಪಯಸ್ವಿನಿ -ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿದ್ದ 2ನೇ ಕಾರ್ಯಕ್ರಮ ರಕ್ತದಾನ ಮಾಹಿತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರದಾನ

ಸುಳ್ಯ : ಜೇಸಿಐ ಸುಳ್ಯ ಪಯಸ್ವಿನಿ (ರಿ ), ಸುಳ್ಯ, ವತಿಯಿಂದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೆಸಿಐ ಸುಳ್ಯ ಪಯಸ್ವಿನಿ ಘಟಕದ 2ನೇ ಕಾರ್ಯಕ್ರಮ ರಕ್ತದಾನ ಜಾಗೃತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 16ರಂದು ಘಟಕಾಧ್ಯಕ್ಷರಾದ ಜೆ. ಎಫ್ ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಸ್ವರ್ಣಕಲಾ ಎ

ಜೇಸಿಐ ಸುಳ್ಯ ಪಯಸ್ವಿನಿ -ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿದ್ದ 2ನೇ ಕಾರ್ಯಕ್ರಮ ರಕ್ತದಾನ ಮಾಹಿತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರದಾನ Read More »

ತೊಡಿಕಾನ‌ ಶಾಲಾ ಮಂತ್ರಿ ಮಂಡಲ ರಚನೆ

ಸರಕಾರಿ ಹಿರಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೋಡಿಕಾನ ಇಲ್ಲಿಯ ೨೦೨೬-೨೭ ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆ ಮೂಲಕ ರಚಿಸಲಾಯಿತು.ಶಾಲಾ ಮುಖ್ಯಮಂತ್ರಿಯಾಗಿ ಧೃತನ್ ಎ.ಆರ್‌ (೭ನೇ ತರಗತಿ) ಮತ್ತು ಉಪ ಮುಖ್ಯಮಂತ್ರಿಯಾಗಿ ಭೂಷಣ್ – ಕೆ. ಭಟ್ (೬ ನೇ) ಆಯ್ಕೆಯಾದರು. ಗೃಹಮಂತ್ರಿಯಾಗಿ ಕರುಣೇಶ್‌ (೭ನೇ), ಉಪಗೃಹಮಂತ್ರಿಯಾಗಿ ಹರ್ಷಿತ್ ಎ.ಕೆ. (೭ನೇ), ನೀರಾವರಿ ಮಂತ್ರಿಯಾಗಿ ಹವಿನ್ ಎ.ಪಿ.(೭ನೇ), ಉಪ ನೀರಾವರಿ ಮಂತ್ರಿಯಾಗಿ ತನುಷ್ ಬಿ.ಎನ್. (೭ನೇ), ವಿದ್ಯಾಮಂತ್ರಿಯಾಗಿ ಕೆ.ಎನ್‌.ತುಷಿತಾ (೭ನೇ), ಉಪವಿದ್ಯಾಮಂತ್ರಿಯಾಗಿ ತ್ರೀಕ್ಷಾ (೭ನೇ),

ತೊಡಿಕಾನ‌ ಶಾಲಾ ಮಂತ್ರಿ ಮಂಡಲ ರಚನೆ Read More »

ಸುಳ್ಯ : ಶಾಲಾ ಕೊಠಡಿ ಮತ್ತು ಶೌಚಾಲಯ ಉದ್ಘಾಟನೆ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಪಿಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಪಿಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಹೆಚ್ಚುವರಿ ಕೊಠಡಿ ಉದ್ಘಾಟನೆ ಹಾಗೂ 2024 – 25 ನೇ ಸಾಲಿನಲ್ಲಿ ಎಂ.ಆ‌ರ್.ಪಿ.ಎಲ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಜೂ.16 ರಂದು ಬೆಳಗ್ಗೆ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಯನ್ನು ಉದ್ಘಾಟಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ

ಸುಳ್ಯ : ಶಾಲಾ ಕೊಠಡಿ ಮತ್ತು ಶೌಚಾಲಯ ಉದ್ಘಾಟನೆ Read More »

ಸುಳ್ಯ : ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆ ಸುಳ್ಯ ಯೋಜನಾ ಕಚೇರಿಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಜಯವಂತ್ ಪಟಗಾರ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿಶೌರ್ಯ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿ ಸುಳ್ಯ ತಾಲೂಕಿನ ಶೌರ್ಯ ಘಟಕಗಳ ಮಾಸಿಕ ಸಭೆ ಶ್ರಮದಾನ ಹಾಗೂ ಘಟಕ ಬಲವರ್ಧನೆ

ಸುಳ್ಯ : ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆ Read More »

error: Content is protected !!
Scroll to Top