September 3, 2026

ಸುಮಾ ಕೆ.ಎಸ್. ಅವರಿಗೆ ‘ವಚನ ಮಂದಾರ’ ರಾಜ್ಯ ಪ್ರಶಸ್ತಿ

ಬೆಂಗಳೂರು: ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ವಚನ ಮಂದಾರ’ ರಾಜ್ಯ ಪ್ರಶಸ್ತಿಗೆ ಹೆಸರಾಂತ ಗಾಯಕಿ ಸುಮಾ ಕೆ.ಎಸ್. ಬಾಳಿಲ ಅವರು ಭಾಜನರಾಗಿದ್ದಾರೆ.ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಗಣ್ಯರು ಹಾಗೂ ಕಲಾ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.ಸುಮಾ ಕೆ.ಎಸ್. ಅವರು ಈ ಹಿಂದೆ ಪಂಡಿತ ಪುಟ್ಟರಾಜ ಗವಾಯಿ ಸ್ಮರಣಾರ್ಥದ ಕಲಾ ವಿಕಾಸ ಯುವಸಿರಿ ರಾಜ್ಯ ಪ್ರಶಸ್ತಿ, ರಾಜ್ಯ ಯುವ […]

ಸುಮಾ ಕೆ.ಎಸ್. ಅವರಿಗೆ ‘ವಚನ ಮಂದಾರ’ ರಾಜ್ಯ ಪ್ರಶಸ್ತಿ Read More »

ಎಡಮಂಗಲ : ಗ್ರಾಮ ಸಹಾಯಕ ಆತ್ಮಹತ್ಯೆ

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿರುವ ಯುವಕ ಆತ್ಮ ಹತ್ಯೆಮಾಡಿಕೊಂಡ ಘಟನೆ ವರದಿಯಾಗಿದೆ.ದೀಪಕ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಎಡಮಂಗಲದ ಪುಳಿಕುಕ್ಕು ನಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಡಮಂಗಲ : ಗ್ರಾಮ ಸಹಾಯಕ ಆತ್ಮಹತ್ಯೆ Read More »

ಸೆ. 6ರಂದು ಮಣಿಪಾಲದಲ್ಲಿ ಮುಕ್ತ ಚೆಸ್ ಸ್ಪರ್ಧೆ

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ವತಿಯಿಂದ ಅಫಿಲಿಯೆನ್ಸ್ ಟೆಕ್ನಾಲಜಿ, ಮಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 30ನೇ ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆ ಸೆಪ್ಟೆಂಬರ್ 6ರಂದು ಮಣಿಪಾಲದ ಡಾ. ಟಿ.ಎಂ.ಎ. ಪೈ ಹಾಲ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 7, 9, 11, 13, 17 ವರ್ಷ ವಯೋಮಿತಿಯ ವಿಭಾಗಗಳೊಂದಿಗೆ ಮುಕ್ತ ವಿಭಾಗದಲ್ಲಿಯೂ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ 20 ಬಹುಮಾನಗಳನ್ನು ನೀಡಲಾಗುತ್ತಿದ್ದು, ಒಟ್ಟು ₹25,500 ನಗದು ಬಹುಮಾನ ವಿತರಿಸಲಾಗುವುದು.

ಸೆ. 6ರಂದು ಮಣಿಪಾಲದಲ್ಲಿ ಮುಕ್ತ ಚೆಸ್ ಸ್ಪರ್ಧೆ Read More »

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದಿಂದ ನೂತನ ಸಬ್ ಇನ್ಸ್‌ಪೆಕ್ಟರ್‌ಗೆ ಸ್ವಾಗತ

ಸುಳ್ಯ: ಸುಳ್ಯ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಅವರನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಅವರು ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಅವರಿಗೆ ಹೂಗುಚ್ಛ ನೀಡಿ ಶುಭಾಶಯಗಳನ್ನು ಕೋರಿದರು. ಬಳಿಕ ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಕಟ್ಟಿ, ಸಹೋದರತೆಯ ಬಾಂಧವ್ಯವನ್ನು ಸಾರಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದಿಂದ ನೂತನ ಸಬ್ ಇನ್ಸ್‌ಪೆಕ್ಟರ್‌ಗೆ ಸ್ವಾಗತ Read More »

ಸೆ.8ರಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ

ಸುಳ್ಯ: ವಿಶ್ವ ಹಿಂದೂ ಪರಿಷತ್ ಸಂಘಟನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸುಳ್ಯದಲ್ಲಿ ಹಿಂದೂ ಬಾಂಧವರನ್ನೊಳಗೊಂಡ ಅದ್ದೂರಿ ಮೊಸರು ಕುಡಿಕೆ ಉತ್ಸವ ಸೆ.8ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ತಿಳಿಸಿದರು. ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಗೋಮಾತೆಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಬಜರಂಗದಳದ ಯುವಕರ ತಂಡ ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು, ದುರ್ಗಾ ವಾಹಿನಿಯೂ ಕೈಜೋಡಿಸಲಿದೆ. ವಿಶ್ವ

ಸೆ.8ರಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ Read More »

error: Content is protected !!
Scroll to Top