ಸೆ. 6ರಂದು ಮಣಿಪಾಲದಲ್ಲಿ ಮುಕ್ತ ಚೆಸ್ ಸ್ಪರ್ಧೆ

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ವತಿಯಿಂದ ಅಫಿಲಿಯೆನ್ಸ್ ಟೆಕ್ನಾಲಜಿ, ಮಂಗಳೂರು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 30ನೇ ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆ ಸೆಪ್ಟೆಂಬರ್ 6ರಂದು ಮಣಿಪಾಲದ ಡಾ. ಟಿ.ಎಂ.ಎ. ಪೈ ಹಾಲ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 7, 9, 11, 13, 17 ವರ್ಷ ವಯೋಮಿತಿಯ ವಿಭಾಗಗಳೊಂದಿಗೆ ಮುಕ್ತ ವಿಭಾಗದಲ್ಲಿಯೂ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ 20 ಬಹುಮಾನಗಳನ್ನು ನೀಡಲಾಗುತ್ತಿದ್ದು, ಒಟ್ಟು ₹25,500 ನಗದು ಬಹುಮಾನ ವಿತರಿಸಲಾಗುವುದು.































ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅಫಿಲಿಯೆನ್ಸ್ ಸಂಸ್ಥೆಯ ಸ್ಥಾಪಕ ಅವಿನಾಶ್ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಕೀಲರಾದ ಶ್ರೀ ರಾಘವೇಂದ್ರ ವೈ.ಟಿ. ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ನಾರಾಯಣ ಗುರು ಸ್ಪೋರ್ಟ್ & ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಪ್ರೊಫೆಸರ್ ಆಫ್ ಸರ್ಜರಿ ಡಾ. ರಾಜಗೋಪಾಲ್ ಶೆಣೈ ಉಪಸ್ಥಿತರಿರುವರು.

ಈ ಕುರಿತು ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ. ಹಾಗೂ ನಿರ್ದೇಶಕಿ ಸೌಂದರ್ಯ ಯು.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9341111024 ಸಂಪರ್ಕಿಸಬಹುದು.

Leave a Comment

Your email address will not be published. Required fields are marked *

error: Content is protected !!
Scroll to Top