ಬೆಂಗಳೂರು: ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ವಚನ ಮಂದಾರ’ ರಾಜ್ಯ ಪ್ರಶಸ್ತಿಗೆ ಹೆಸರಾಂತ ಗಾಯಕಿ ಸುಮಾ ಕೆ.ಎಸ್. ಬಾಳಿಲ ಅವರು ಭಾಜನರಾಗಿದ್ದಾರೆ.
ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಗಣ್ಯರು ಹಾಗೂ ಕಲಾ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಸುಮಾ ಕೆ.ಎಸ್. ಅವರು ಈ ಹಿಂದೆ ಪಂಡಿತ ಪುಟ್ಟರಾಜ ಗವಾಯಿ ಸ್ಮರಣಾರ್ಥದ ಕಲಾ ವಿಕಾಸ ಯುವಸಿರಿ ರಾಜ್ಯ ಪ್ರಶಸ್ತಿ, ರಾಜ್ಯ ಯುವ ಪುರಸ್ಕಾರ, ರಾಜ್ಯ ಪ್ರಶಸ್ತಿ ಹಾಗೂ ಪಂಚ ಪಂಚಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿರುವ ಅವರು, ಚಂದನ ವಾಹಿನಿಯ ‘ಸ್ವರ ಮಾಧುರ್ಯ’ ಕಾರ್ಯಕ್ರಮದಲ್ಲೂ ಸಾಧನೆ ಮಾಡಿದ್ದಾರೆ.
ಯುವಜನ ಮೇಳಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಅವರು ಪ್ರಸ್ತುತ ದಳ ಸುಬ್ರಾಯ ಭಟ್ ಅವರ ನ್ಯಾಯವಾದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾ ಕೆ.ಎಸ್. ಅವರಿಗೆ ‘ವಚನ ಮಂದಾರ’ ರಾಜ್ಯ ಪ್ರಶಸ್ತಿ




















