ಸಂಪಾಜೆ : ಕೇರಳದಲ್ಲಿ ಕೊಲೆ ಮಾಡಿದ ಆರೋಪಿಗಳ ಥಾರ್ ವಾಹನ ದೇವರಕೊಲ್ಲಿಯಲ್ಲಿ ಪತ್ತೆ, ಆರೋಪಿಗಳು ಪರಾರಿ

ಕೇರಳ ಪಾಲಕ್ಕಾಡ್ ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಗಳು ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಸೆ. 17ರಂದು ಸಂಜೆ ನಡೆದಿದ್ದು ಅವರ ಥಾರ್ ವಾಹನ ದೇವರಕೊಲ್ಲಿ ಪತ್ತೆಯಾಗಿದೆ.
ಆರೋಪಿಗಳು ತಮ್ಮ ಥಾರ್ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿಯ ಜಾಡು ಹಿಡಿದ ಕೇರಳ ಪೊಲೀಸರು ಅವರನ್ನು ಬಂಧಿಸಲು ಕಲ್ಲುಗುಂಡಿ ಹೊರ ಠಾಣಾ ಸಮೀಪ ತಯಾರಾಗಿದ್ದರು.
ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿಯಿಂದ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ತಮ್ಮ ವಾಹನವನ್ನು‌ ತಿರುಗಿಸಿ ಹಿಂದುರುಗಿ ಹೋದರು. ಈ ವಿಷಯ ತಿಳಿದ ಸಾರ್ವಜನಿಕರು ದೇವರಕೊಲ್ಲಿ ಬಳಿ ವಾಹನ‌ ತಡೆಯಲು ರೆಡಿಯಾಗಿದ್ದರು.ಇದನ್ನು ತಿಳಿದುಕೊಂಡ ಆರೋಪಿಗಳು ದೇವರ ಕೊಲ್ಲಿ ಬಳಿ ಕಾರನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top