ಅರಂಬೂರು : ಇಂದು ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಶುಭಾರಂಭ

ಸುಳ್ಯ ನಗರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನವರಸಗಳ ರಸಪಾಕದ ಖಾದ್ಯಗಳನ್ನು ಉಣಬಡಿಸುವ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಸೆ.24ರಂದು ಶುಭಾರಂಭಗೊಳ್ಳುತಿದೆ. ರಸಪಾಕ ಗ್ರೂಪ್‌ನ ಈ ನೂತನ ಹೋಟೆಲ್‌ನಲ್ಲಿ ದೇಶದ ಎಲ್ಲಾ ವಿಧದ ಸಸ್ಯಾಹಾರಿ ಖಾದ್ಯಗಳು ದೊರೆಯುವ ರುಚಿ ವೈವಿಧ್ಯತೆಯ ತಾಣವಾಗಲಿದೆ.
ಉತ್ತರ ಭಾರತದ ಎಲ್ಲಾ ಸಸ್ಯಾಹಾರಿ ಊಟ ಉಪಹಾರಗಳು, ಜೈನ್ಸ್ ಫುಡ್‌ಗಳು, ಚೈನೀಸ್ ಖಾದ್ಯಗಳು, ರುಚಿ ವೈವಿಧ್ಯತೆಯ ಚಾರ್ಟ್ಸ್ಗಳು, ಫ್ರೆಶ್ ಜ್ಯೂಸ್, ಐಸ್‌ಕ್ರೀಂ ಸೇರಿದಂತೆ ಎಲ್ಲಾ ವರ್ಗದವರಿಗೂ ಇಷ್ಟವಾಗುವ ಎಲ್ಲಾ ಊಟ, ಉಪಾಹಾರಗಳು ಅತ್ಯಂತ ಉತ್ಕೃಷ್ಟ ಗುಣಮಟ್ಟದ ಮತ್ತು ರುಚಿಭರಿತವಾಗಿ ಲಭ್ಯವಿರಲಿದೆ.
ಎಸಿ ಹಾಗೂ ನಾನ್‌ಸಿ, ಮಿನಿ ಸಭಾಂಗಣ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಹಚ್ಚ ಹಸಿರು ಪರಿಸರದ ಸುಂದರ ವಾತಾವರಣ, ಸುತ್ತಲೂ ಹಸಿರು ಹೊದ್ದ ಪರಿಸರ ಗ್ರಾಹಕರಿಗೆ ಮುದ ನೀಡಲಿದೆ. ಉದ್ಯಮಿಗಳಾದ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ನೇತೃತ್ವದ ‘ರಸಪಾಕ ಗ್ರೂಪ್ಸ್’ನ ನೂತನ ಹೋಟೆಲ್ ‘ಶ್ರೀಕೃಷ್ಣರಸಪಾಕ ಗ್ರಾಂಡ್’ ಸುಳ್ಯದ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸ ರಚಿಸಲು ಸಿದ್ಧವಾಗಿದೆ.ಸರ್ವ ವ್ಯವಸ್ಥೆಯೊಂದಿಗೆ ಸರ್ವರಿಗೂ
ಸರ್ವ ವ್ಯವಸ್ಥೆಯೊಂದಿಗೆ ಸರ್ವರಿಗೂ ಇಷ್ಟವಾಗುವಂತ ಖಾದ್ಯಗಳನ್ನು, ತಿಂಡಿ ತಿನಿಸುಗಳನ್ನು ಉಣ ಬಡಿಸಲು ಸಕಲ ಸಿದ್ದತೆಯೊಂದಿಗೆ ”ರಸಪಾಕ ಗ್ರಾಂಡ್ ಆರಂಭವಾಗಲಿದೆ. ಸುಂದರ ವಿನ್ಯಾಸದ ಸಂಕೀರ್ಣದಲ್ಲಿ ಲೋಕಾರ್ಪಣೆಗೊಳ್ಳಲಿರುವ ಹೋಟೆಲ್‌ ಶ್ರೀಕೃಷ್ಣ ರಸಪಾಕ ಗ್ಯಾಂಡ್‌ನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ಮುಂದೆಯೂ ಪ್ರೋತ್ಸಾಹಿಸಬೇಕೆಂದು ರಸಪಾಕ ಗ್ರೂಪ್‌ನ ಪಾಲುದಾರರಾದ ಕೃಷ್ಣ ಕಾಮತ್ ಹಾಗೂ ನಾರಾಯಣ ಕೇಕಡ್ಕ ವಿನಂತಿಸಿದ್ದಾರೆ.
ಶ್ರೀಕೃಷ್ಣ ರಸಪಾಕ ಸೆ.24ರಂದು ಶುಭಾರಂಭಗೊಳ್ಳಲಿದೆ. ಪೂ.9.30ಕ್ಕೆ ನಡೆಯುವ ಸಮಾರಂಭದಲ್ಲಿ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸುವರು.ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಆಶೀರ್ವಚನ ನೀಡುವರು.ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್ ಸೆಂಟರ್‌ನ ಡಾ.ಅನಂತ್ ಕಾಮತ್, ಅಕಾಡೆಮಿ ಆಫ್ ಲಿಬರಲ್
ಈ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ,ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.
ಸೀತಾರಾಮ, ಶ್ರೀ ಚೆನ್ನಕೇಶವ ದೇವಸ್ಥಾನದ
ಅನುವಂಶಿಕ ಆಡಳಿತ ಮೊಕ್ತಸರ ಡಾ.ಹರಪ್ರಸಾದ್ ತುದಿಯಡ್ಕ,ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣಾ ವಸಂತ್ ಅಧ್ಯಕ್ಷರು, ಸುಳ್ಯ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ
ಅಧ್ಯಕ್ಷ ಕೆ.ಎಂ.ಮುಸ್ತಫ,ವರ್ತಕರಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ನ.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ ಮೋಹನ್‌, ಆಲೆಟ್ಟಿ ಗ್ರಾ.ಪಂ.ಸದಸ್ಯರಾದ ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಇಡ್ಯಡ್ಕ ಭಾಗವಹಿಸಲಿದ್ದಾರೆ ಎಂದು ರಸಪಾಕ ಗ್ರೂಪ್‌ನ ನಾರಾಯಣ ಕೇಕಡ್ಯ ಹಾಗೂ ಕೃಷ್ಣ ಕಾಮತ್‌ ತಿಳಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top