ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಗೆ ನೇಮಕಗೊಂಡ ಟಿ.ಎಂ ಶಹೀದ್ ರವರಿಗೆ ತೆಕ್ಕಿಲ್ ಕುಟುಂಬಸ್ಥರಿಂದ ಸನ್ಮಾನ

ಸೆ. 27 ರಂದು ಅರಂತೋಡು ಅಬ್ದುಲ್ ಲತೀಫ್ ಮೊಟ್ಟೆಂಗಾರ್ ರವರ ನಿವಾಸದಲ್ಲಿ ನಡೆದ ದಿ| ಮೊಟ್ಟೆಂಗಾರ್ ಮೊಹಮ್ಮದ್ ಹಾಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ
ತೆಕ್ಕಿಲ್ ಕುಟುಂಬಸ್ಥರಾದ ಅಶ್ರಫ್ ತೆಕ್ಕಿಲ್, ಟಿ.ಎಂ ಅಬ್ದುಲ್ ಲತೀಫ್ ತೆಕ್ಕಿಲ್, ಟಿ.ಎಂ ಅಬ್ದುಲ್ ರಜಾಕ್ ತೆಕ್ಕಿಲ್, ಟಿ.ಎಂ ಖಾಲಿದ್ ತೆಕ್ಕಿಲ್ ರವರು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಸನ್ಮಾನಿಸಿ ಗೌರವಿಸಿದರು. ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಖತೀಬರಾದ ಬಹು| ನಈಮ್ ಫೈಝಿಯವರು ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗು ಪೇರಡ್ಕ ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಪೇರಡ್ಕ ಜುಮಾ ಮಸೀದಿ ಮುಅಲ್ಲಿಮ್ ರಾದ ಶಾಕಿರ್ ಪೊಳ್ಯ, ಹಾರೀಸ್ ಅಲ್ ಕಾಮಿಲ್ ಅಝ್ಹರಿ, ಸುಳ್ಯ ಜಟ್ಟಿಪಳ್ಳ ಮದರಸದ ಲತೀಫ್ ಸಖಾಫಿ ಗೂನಡ್ಕ, ಸಾಜಿದ್ ಅಝ್ಹರಿ ಪೇರಡ್ಕ, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಸೆಂಟ್ಯಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹೆಚ್.ಎ. ಅಶ್ರಫ್ ಬಾಲೆಂಬಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅರಂತೋಡು, ಹೋನೆಸ್ಟ್ ಅಬ್ದುಲ್ಲ ಕಲ್ಲುಗುಂಡಿ, ಸಂಶುದ್ದೀನ್ ಸಾಲ್ಮರ, ರಫೀಕ್ ಸಂಪ್ಯ ಮಶೂದ್ ಸಂಪ್ಯ ಮೊದಲಾದವರು ಉಪಸ್ಥಿತರಿದ್ದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top