ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಹಿಂದಿ ವಿಭಾಗದ ವತಿಯಿಂದ ರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮವನ್ನು ಸೆ. 25ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿಖಿತಾ ಕೆ, ಹಿಂದಿ ಅನುವಾದ ಅಧಿಕಾರಿ, ಆಡಳಿತಾತ್ಮಕ ಭಾಷಾ ವಿಭಾಗ, ಏನ್.ಐ.ಟಿ.ಕೆ. ಸುರತ್ಕಲ್ ಇವರು ಆಗಮಿಸಿ ಹಿಂದಿ ಭಾಷೆಯ ಮಹತ್ವದ ಕುರಿತು ಮಾತನಾಡಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಇವರು ಸ್ವಾಗತಿಸಿ, ಹಿಂದಿ ಸಂಘದ ಉಪಾಧ್ಯಕ್ಷೆ ಜಸ್ಮಿತ ಇವರು ವಂದಿಸಿದರು. ದ್ವಿತೀಯ ಬಿ.ಕಾಮ್ ವಿದ್ಯಾರ್ಥಿ ದಿಶಾ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬಂತು.
ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಕಾರ್ಯಕ್ರಮ

















