ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಐದನೇ ದಿನವಾದ ಅ.3ರಂದು ಮಕ್ಕಳ ದಸರಾ ನಡೆಯಿತು.
ಮಕ್ಕಳಿಗೆ ಬೇರೆ ಬೇರೆ ವಿಭಾಗ ಮಾಡಿ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಅನೇಕ ಮಕ್ಖಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಕ್ಕಳ ದಸರಾ ಸಭಾ ಕಾರ್ಯಕ್ರಮ ವನ್ನು ಪ್ರತಿಭಾನ್ವಿತ ಕಲಾವಿದರಾದ ಸ್ವರಾ ಎನ್.ಎಲ್., ಆದಿತ್ಯ ಪಿ ಪ್ರಮೋದ್, ದೈವಿಕ್ ಪಿ. ಪ್ರಮೋದ್ ರವರು ದೀಪ ಬೆಳಗಿ ಉದ್ಘಾಟಿಸಿದರು.
ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ., ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಮಧುಸೂದನ್, ಮಕ್ಕಳ ದಸರಾ ಸಂಯೋಜಕ ಲೋಕೇಶ್ ಊರುಬೈಲು, ದಿನದ ಕಾರ್ಯಕ್ರಮ ಉಸ್ತುವಾರಿಗಳಾದ ಕೃಷ್ಣ ಬೆಟ್ಟ, ಬಾಲಕೃಷ್ಣ ಎಸ್.ಬಿ. ಲ್ಯಾಬ್, ಬಹುಮಾನ ಪ್ರಾಯೋಜಕರಾದ ಸ್ವಾಗತ್ ಐಸ್ ಕ್ರೀಂ ಪ್ರಭಾಕರನ್ ನಾಯರ್, ಶಶಿಕಲಾ ಪ್ರಭಾಕರನ್ ಇತರರು ಉಪಸ್ಥಿತರಿದ್ದರು.
ಸುಳ್ಯ : ಮಕ್ಕಳ ದಸರಾ ಉದ್ಘಾಟನೆ














































