ಪರಪ್ಪೆಯಲ್ಲಿ ಮರ ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಹೂತು ಹೋದ ಪರಿಣಾಮ ಸುಳ್ಯ ಕಾಸರಗೋಡು ಅಂತರ್ ರಾಜ್ಯ ಸಂಪರ್ಕ ರಸ್ತೆ ತಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ಪರಪ್ಪೆ ಸಮೀಪ ಮೋರಿ ಕೆಲಸ ನಡೆಯುತ್ತಿದ್ದ ಪರಿಣಾಮ ಸಿಂಗಲ್ ರಸ್ತೆಯಲ್ಲಿ ವಾಹನ ಸಂಚಾರಿಸಲು ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಲಾರಿ ಸಂಚಾರಿಸುತ್ತಿದ್ದಾಗ ಲಾರಿಯ ಚಕ್ರಗಳು ಹೂತು ಹೋದ ಪರಿಣಾಮ ರಸ್ತೆ ತಡೆ ಉಂಟಾಗಿದೆ.ರಸ್ತೆ ತಡೆ ಉಂಟಾದ ಹಿನ್ನಲೆಯಲ್ಲಿ ಕೊಟ್ಯಾಡಿ ಆಡೂರು ಮಂಡೆಕೋಲು ಅಜ್ಜಾವರ ಮಾರ್ಗವಾಗಿ ಸುಳ್ಯಕ್ಕೆ ವಾಹನಗಳು ಬರುತ್ತಿವೆ.ಇನ್ನು ಕೆಲವು ವಾಹನಗಳು ಈಶ್ವರಮಂಗಲ ಕಾವು ರಸ್ತೆಯ ಮೂಲಕ ಸಂಚಾರಿಸುತ್ತಿವೆ ಎಂದು ತಿಳಿದು ಬಂದಿದೆ.ಇದರಿಂದ ನೂರಾರು ಪ್ರಯಾಣಿಕರು. ಮುಂಜಾನೆಯೇ ಸಮಸ್ಯೆಗೊಳಗಾಗಿದ್ದಾರೆ.
ರಸ್ತೆ ಮಧ್ಯೆ ಹೂತು ಹೋದ ಲಾರಿ,ಸುಳ್ಯ ಕಾಸರಗೋಡು ಅಂತರ್ ರಾಜ್ಯ ಸಂಪರ್ಕ ರಸ್ತೆ ತಡೆ

















