ಸಂಸ್ಕೃತಿ ಬೆಳೆಯಬೇಕಾದರೆ ಭಾಷೆ ಬೆಳೆಯಬೇಕು : . ಪುರುಷೋತ್ತಮ ಕೆ ವಿ ಕರಂಗಲ್ಲು

ಸಂಸ್ಕೃತಿ ಬೆಳೆಯಬೇಕಾದರೆ ಭಾಷೆ ಬೆಳೆಯಬೇಕು,ಭಾಷೆ ಬೆಳೆಯಬೇಕಾದರೆ ಸಂಸ್ಕೃತಿ ಬೆಳೆಯಬೇಕು ಎಂದು
ಸಾಹಿತಿ, ಸಂಶೋಧಕರಾದ ಡಾ. ಪುರುಷೋತ್ತಮ ಕೆ ವಿ ಕರಂಗಲ್ಲು ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕ,ಸಾಹಿತ್ಯ ಸಮ್ಮೇಳ ಸಂಘಟನಾ ಸಮಿತಿ ಇದರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನ.16ರಂದು ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಕನ್ನಡ ತನ್ನ ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ.ಕನ್ನಡ ಭಾಷೆಯನ್ನು ಬೆಳೆಸಲು ಶಿಕ್ಷಕರ ಪಾತ್ರ ಮಹತ್ವವಾದುದು.ಕನ್ನಡ ಬಗ್ಗೆ ಅವರು ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ.ಕನ್ನಡ ಇಂದು ಎಲ್ಲಾ ಭಾಷೆಗಳಿಗೆ ತಾಯಿ ಭಾಷೆಯಾಗಿ ಬೆಳೆದು ನಿಂತಿರುವುದು ಹೆಮ್ಮೆ.ಅರೆಭಾಷೆ ಊರಿನ ನಾಡಿನ ಭಾಷೆಯಾಗಿ ಬೆಳೆಯುತ್ತಿದೆ. ಕನ್ನಡವನ್ನು ಉಳಿಸೋಣ ಬೆಳೆಸೋಣ ಎಂದು‌ ಹೇಳಿದರು.
ಸುಳ್ಯ ತಾಲೂಕು ಹಾಗೂ ಗಡಿ ಭಾಗದ ತಾಲೂಕಿನ ರೈತರು ಕ್ರಷಿ ಬೆಳೆಗಳಿಗೆ ಬಾಧಿಸಿರುವ ವಿವಿಧ ರೋಗಗಳಿಂದ,ಕಾಡು ಪ್ರಾಣಿಗಳ ಉಪಟಳದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಈ ಸಮಸ್ಯೆಯ ಬಗ್ಗೆ ಸರಕಾರ ಗಮನಹರಿಸಲು‌ ನಾವು ಸಂಘಟಿತರಾಗುವ ಅಗತ್ಯತೆ ಇದೆ ಎಂದರು.
ಹಿರಿಯ ಸಾಹಿತಿ, ಸಂಶೋಧಕರಾದ ಎ.ಕೆ.ಹಿಮಕರ ಸಮ್ಮೇಳನದ ಸರ್ವ ಅಧ್ಯಕ್ಷತೆ ವಹಿಸಿದ್ದಾರೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರು ಕನ್ನಡ ಮಾದ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದರ ಮೂಲಕ ಕನ್ನಡವನ್ನು ಬೆಳೆಸೋಣ.ವೇದಿಕೆಯಲ್ಲಿ ಕುಳಿತುಕೊಂಡು ಕನ್ನಡದ ಕಾಳಜಿ ಬಗ್ಗೆ ಮಾತನಾಡಿ ಮಕ್ಕಳನ್ನು‌ ಆಂಗ್ಲ ಮಾದ್ಯಮ ಶಾಲೆಗೆ ಕಳುಹಿಸುವ ಕೆಲಸ ಮಾಡಬೇಡಿ.ನಾವು ಸಾಹಿತಿಗಳು ಅಲ್ಲದಿದ್ದರೂ ಇತರರ ಸಾಹಿತ್ಯ ಪುಸ್ತಕಗಳನ್ನು ಕೊಂಡುಕೊಂಡು ಓದಿ ಅವರಿಗೆ ಪೋತ್ಸಾಹ ಮಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಕೊಂಡು ಓದಗಬೇಕು.ಅರೆಭಾಷೆ ಅಕಾಡೆಮಿಯಿಂದ ಪ್ರಕಟವಾಗುವ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರಹಗಾರರಿಗೆ ಅವಕಾಶಗಳಿಗೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ ಪಿ ಶ್ರೀನಾಥ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಆಶಯ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮ್ಮೇಳನ‌ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಪಂಜ ಹೋಬಳಿ‌ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ,ಜಿಲ್ಲಾ ಸಮಿತಿ ಪದಾಧಿಕಾರಿ ರಾಮಚಂದ್ರ ಪಲ್ಲತ್ತಡ್ಕ, ಸಂಘಟನಾ ಸಮಿತಿ ಕಾರ್ಯದರ್ಶಿ ಕೇಶವ ಹೊಸಯೊಳಿಕೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಗೌಡರು ಮುಖ್ಯ ರಸ್ತೆಯಲ್ಲಿ ನಡೆದ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಿದರು.ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯ ರಾಷ್ಟ್ರಧ್ವಜಾರೋಹಣ, ಡಾ. ಎಂ ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ, ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಸಾಹಿತ್ಯ ಸಮ್ಮೇಳನದ ಸಂಘಟ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸ್ವಾಗತಿಸಿದರು.ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.ಕೇಶವ ಹೊಸಯೊಳಿಕೆ ವಂದಿಸಿದರು.
ಮಾದವ ಮೂಕಮಲೆ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ಎ.ಕೆ ಹಿಮಕರರ ಪರಿಚಯ ಓದಿದರು‌.
ಸಾಹಿತ್ಯ ಪರಿಷತ್ ನ ಕೋಶಧಿಕಾರಿ ದಯಾನಂದ ಆಳ್ವ,ಸುಳ್ಯ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿ ಸಂಚಾಲಕ ಯೋಗಿಶ್ ಹೊಸಯೊಳಿಕೆ, ಸುಳ್ಯ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡೆಪಳ, ನಿರ್ದೆಶಕಿ ಲತಾಶ್ರೀ ಸುಪ್ರಿತ್ ಮೋಂಟಡ್ಕ,ಹಿರಿಯ ಸಾಹಿತಿಗಳಾದ ಕೆ.ಆರ್ ಗಂಗಾಧರ, ಲೀಲಾದಾಮೋದರ್ ಕುಂದಲ್ಪಾಡಿ ಇತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top