ಅರೆಭಾಷೆ ಬೆಳವಣಿಗೆಗೆ ಅಪ್ಪ ನಾಟಕ ಪೂರಕವಾಗಲಿ.ಅರೆಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಕಾಡೆಮಿ ಆಪ್ ಲಿಬರಲ್ ಏಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಚಿದಾನಂದ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಅರೆಭಾಷೆ ನಾಟಕ ಅಪ್ಪ ಉದ್ಘಾಟನೆ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಅರೆಭಾಷೆ ನಾಟಕ ಅಪ್ಪ ಅತೀ ಹೆಚ್ಚು ಪ್ರದರ್ಶನ ಕಾಣಲು ಅರೆಭಾಷೆ ಅಕಾಡೆಮಿ ಕಡೆಯಿಂದ ಗುರಿ ಇರಿಸಿಕೊಳ್ಳಲಾಗಿದೆ.ಎಲ್ಲಾರು ಸಹಕಾರ ನೀಡಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ತುಕಾರಾಮ ಏನೆಕಲ್ಲು ಮಾತನಾಡಿ ನಾಟಕ ಸಂಸ್ಕಾರ ಮತ್ತು ಶಿಕ್ಷಣ ಕಲಿಸುತ್ತದೆ ಎಂದು ಹೇಳಿದರು.
ಎನ್.ಎಂ.ಸಿಯ ಪ್ರಾಂಶುಪಾಲ ರುದ್ರಕುಮಾರ್, ರಂಗ ಕರ್ಮಿ ಭಾಸುಮ ಕೊಡಗು,ಅಕಾಡೆಮಿ ಸದಸ್ಯ ಹಾಗೂ ನಾಟಕ ನಿರ್ದೆಶಕ ಲೋಕೇಶ್ ಊರುಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಸ್ವಾಗತಿಸಿ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.ಲೋಕೇಶ್ ಊರುಬೈಲ್ ವಂದಿಸಿದರು.
ಅರೆಭಾಷೆ ಬೆಳವಣಿಗೆಗೆ ಅರೆಭಾಷೆ ನಾಟಕ ಅಪ್ಪ ಪೂರಕವಾಗಲಿ : ಡಾ.ಕೆ.ವಿ ಚಿದಾನಂದ

















