ಬೆಳೆ ವಿಮೆ ಅತೀ ಕಡಿಮೆ ಮೊತ್ತ ರೈತರ ಖಾತೆಗಳಿಗೆ ಜಮೆ ಆಗಿದ್ದು ರೈತರ ಸಮಸ್ಯೆ ಪರಿಹಾರಕ್ಕೆ ಸ್ಪಂಧಿಸುವೆ : ಸಂಸದ ಕ್ಯಾ.ಚೌಟ

ಹವಾಮಾನ ಆಧಾರಿತ ಬೆಳೆ ವಿಮೆಯ ಮೊತ್ತ ಈ ಬಾರಿ ರೈತರಿಗೆ ಸಮರ್ಕಪ ಪ್ರಮಾಣದಲ್ಲಿ ಬಂದಿಲ್ಲ ಅದರ ಗೊಂದಲ ನಿವಾರಣೆ ಹಾಗೂ ಇದರಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಜತೆ ಮಾತನಾಡಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ರೈತ ದಿನಾಚರಣೆ ಕಾರ್ಯಕ್ರಮದ 2025-26 ನೇ ಸಾಲಿನ ಆತ್ಮ ಯೋಜನೆ ಕಿಸಾನ್ ಗೋಷ್ಠಿ ಘಟಕದಡಿ ವಿಜ್ಞಾನಿಗಳು, ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮ ದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

“ಅಡಿಕೆ ಎಲೆ ಹಳದಿ ಎಲೆ ರೋಗದ ಸಮಸ್ಯೆ ಕುರಿತು ನಾನು ಸಚಿವರ ಗಮನಕ್ಕೆ ತಂದಿದ್ದೇನೆ ಮುಂದುವರಿದ ಭಾಗವಾಗಿ ಆ ಪ್ರದೇಶದಲ್ಲಿ ಎಷ್ಟು ಕೃಷಿ ನಷ್ಟ ಆಗಿದೆ ಅದರ ಸರ್ವೆ ನಡೆಯುತ್ತಿದೆ. ಅದರ ವರದಿ ಸಚಿವ ರಿಗೆ ನೀಡಲಾಗುವುದು. ಮುಂದಿನ ದಿನದಲ್ಲಿ ಕೇಂದ್ರ ಕೃಷಿ ಸಚಿವರು ಸುಳ್ಯಕ್ಕೆ ಬಂದು ಇಲ್ಲಿ ಕೃಷಿಕರೊಂದಿಗೆ ಈ ಕುರಿತು ಸಂವಾದ ನಡೆಸಲಿದ್ದಾರೆ. ಅವರು ಬರುವ ದಿನ ನಿಗದಿಯಾದ ಕೂಡಲೇ ತಿಳಿಸುತ್ತೇನೆ” ಎಂದವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ “ಬೆಳೆ ವಿಮೆ ಬಂದುದರಲ್ಲಿ ಇಲ್ಲಿಯ ರೈತರಿಗೆ ಅನ್ಯಾಯ ಆಗಿದೆ. ಅವರು ಕಟ್ಟಿದ ಹಣದಷ್ಟು ಆದರೂ ಸಿಗುತಿದ್ದರೆ ಸಮಾಧಾನ ಆಗುತಿತ್ತು. 10 ಸಾವಿರ ಪಾವತಿಸಿದವನಿಗೆ 2 ಸಾವಿರ ಬಂದಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಮತ್ತೊಮ್ಮೆ ಸರ್ವೆ ನಡೆಸಿ ರೈತನಿಗೆ ಸರಿಯಾದ ರೀತಿಯಲ್ಲಿ ವಿಮೆ ಸಿಗುವಂತೆ ಮಾಡಬೇಕು” ಎಂದು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರಾ ಕೋಲ್ಟಾರ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ ಅಡ್ಡಂಗಾಯ, ಸುಳ್ಯ ತಹಶೀಲ್ದಾರ್ ಮಂಜುಳಾ, ತೋಟಗಾರಿಕಾ ಇಲಾಖೆಯ ಸುಹಾನ, ಸುಳ್ಯ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸುದರ್ಶನ ಸೂರ್ತಿಲ, ಸುಳ್ಯ ರೈತ ಉತ್ಪಾದಕ ಕಂಪೆನಿಯ ಸಿ.ಇ.ಒ. ಹರೀಶ್ ವೇದಿಕೆಯಲ್ಲಿ ಇದ್ದರು.
6 ಮಂದಿ ಸಾಧಕ ರೈತರಾದ ಪದ್ಮನಿ ಡಿ.ಎಸ್., ಶಂಕರ ಕೆ. ಅಡ್ಡಣಪಾರೆ, ಕರುಣಾಕರ ಎ., ಹಿಮಕರ ಕುಕ್ಕುಡೇಲು, ನವೀನ್ ಚಂದ್ರ ಚಾತುಬಾಯಿ, ಪ್ರಕಾಶ ಮುಂಡೋಡಿಯರನ್ನು ಸನ್ಮಾನಿಸಲಾಯಿತು.
ಕೃಷಿ ಭಾಗ್ಯ ಹಸ್ತಪ್ರತಿಯನ್ನು ಸಂಸದರು ಬಿಡುಗಡೆ ಮಾಡಿದರು. ಕೃಷಿ ಕೆಲಸ ಮಾಡುವಾಗ ಆಕಸ್ಮಿಕ ಮರಣ ಸಂಬಂವಿಸಿದ ನಾಲ್ವರ ಕುಟುಂಬಕ್ಕೆ 2 ಲಕ್ಷದಂತೆ ಕೃಷಿ ಇಲಾಖೆಯಿಂದ ಪರಿಹಾರ ಮೊತ್ತ ವಿತರಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ್ ಹೆಚ್.ದಾನೇಗೌಡರ್ ಪ್ರಾಸ್ತಾವಿಕ ಮಾತನಾಡಿದರು.
ಸುಳ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೃಷಿ ಇಲಾಖೆ ಸುಳ್ಯ, ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಸಂಘ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ, ಸಿ.ಎ. ಬ್ಯಾಂಕ್ ಸುಳ್ಯ ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಸನ್ಮಾನ ಕಾರ್ಯಕ್ರಮಕ್ಕೂ ಆರಂಭದಲ್ಲಿ ಸಿಪಿಸಿಆರ್ ಐ ವಿಜ್ಞಾನಿ ಡಾ.ನಾಗರಾಜ್ ರವರು ಅಡಿಕೆ ಉದ್ಯಮದಲ್ಲಾಗುವ ತೋದರೆ, ಹೊಸ ತಳಿ ಇತ್ಯಾದಿಗಳ ಕುರಿತು ಮಾಹಿತಿ ನೀಡಿದರೆ, ಹನಿ ನೀರಾವರಿ ಕುರಿತು ಜೈನ್ ಇರಿಗೇಷನ್ ಸಿಸ್ಟಮ್ ಲಿ. ನ ತಾಂತ್ರಿಕ ಅಧಿಕಾರಿ ದೇವರಾಜ್ ಮಾಹಿತಿ ನೀಡಿದರು.

Leave a Comment

Your email address will not be published. Required fields are marked *

error: Content is protected !!
Scroll to Top