ಪೆರಾಜೆಯಲ್ಲಿ ಅಯ್ಯಪ್ಪ ದೀಪೋತ್ಸವ-ಸಾಧಕರಿಗೆ ಸನ್ಮಾನ

ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದ ವತಿಯಿಂದ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದ ಮುಂಭಾಗ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ನಡೆಯಿತು.
ಅಧ್ಯಕ್ಷತೆಯನ್ನು ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದ ಅಧ್ಯಕ್ಷ ಸುರೇಶ್ ಪೆರುಮುಂಡ ವಹಿಸಿದರು.
ಮುಖ್ಯಅತಿಥಿಗಳಾಗಿ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಗ್ರಾ.ಪಂ.ಸದಸ್ಯೆ ಭೂದೇವಿ ಪೆರಾಜೆ, ಅರಂತೋಡು ಶ್ರೀಮಲ್ಲಿಕಾರ್ಜುನ ಭಜನಾ ಮಂಡಳಿ ಕಾರ್ಯದರ್ಶಿ ಸುರೇಶ್ ಉಳುವಾರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಾಧಕರಾದ ಸುಳ್ಯ ತಾಲೂಕು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಹಾಗೂ ರಕ್ತದಾನಿ ಸುಧಾಕರ ರೈ ಪೆರಾಜೆ, ಪೆರಾಜೆ ಹಿರಿಯ ಯಕ್ಷಗಾನ ಕಲಾವಿದ ಯೋಗೀಶ್ ಕುಂಬಳಚೇರಿ, ಕಡಬ ಶ್ರೀನಿವಾಸ ರೈ ಇವರನ್ನು ಸನ್ಮಾನಿಸಲಾಯಿತು. ಗಿನಿತ್ ಪಾತಿಕಲ್ಲು ಪ್ರಾರ್ಥಿಸಿ, ಮೊಹನ ಪಡ್ಪು ಸ್ವಾಗತಿಸಿದರು. ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರುಮುಂಡ ಕಾರ್ಯಕ್ರಮ ನಿರೂಪಿಸಿ, ಅಶೋಕ ಪೀಚೆ ವಂದಿಸಿದರು. ದಿಪೋತ್ಸವ ಸಂಘದ ಕಾರ್ಯದರ್ಶಿ ಯುವಾನಂದ ಪೆರಂಗಾಜೆ ಹಾಗೂ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಬಳಿಕ ಅಪ್ಪ ಸೇವೆ, ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆ, ಅಗ್ನಿಸೇವೆ, ಗುರುಪಾದವಂದನ, ಅಯ್ಯಪ್ಪ ಸ್ವಾಮಿಯ ಪ್ರಸಾದ ವಿತರಣೆ ನಡೆಯಿತು. ಇದೇ ವೇಳೆ ಕುಕ್ಕೆ ಶ್ರೀಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ವತಿಯಿಂದ ತುಳಸಿ ಜಲಂಧರ ಯಕ್ಷಗಾನ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top