ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯು ತನ್ನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಪ್ರತಿಮ ಸಾಧಕರಿಗೆ ನೀಡುವ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ಸುಳ್ಯ ಬೆಟ್ಟಂಪಾಡಿ ನಿವಾಸಿ ಹವ್ಯಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ಭಾಜನರಾಗಿದ್ದು, ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಭಾಗವಹಿಸಲಾಗದ ಕಾರಣ ಜ್ಞಾನ ಮಂದಾರ ಶೈಕ್ಷಣಿಕ ಸಂಸ್ಥೆಯ ಸಂಸ್ಥಾಪಕರಾದ ಡಾ|ಸಿ. ಸೋಮಶೇಖರ , ಸುಳ್ಯ ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾದ ಮಮತಾ ರವರು ಹಾಗೂ ರವೀಶ್ ಪಡ್ಡಂ ಬೈಲು ಇವರ ಉಪಸ್ಥಿತಿಯಲ್ಲಿ ಬೆಟ್ಟಂಪಾಡಿ ಮನೆಯಲ್ಲಿ ಪುರಸ್ಕರಿಸಲಾಯಿತು
ಪೂಜಾ ಬೋರ್ಕರ್ ಅವರಿಗೆ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರ ಪ್ರದಾನ

























































