ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಒಂದು ತಿಂಗಳ ಕಾಲ ಶ್ರದ್ದಾ ಭಕ್ತಿಯಿಂದ ನಡೆದ ಧನುಪೂಜೆ ಸಂಪನ್ನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಡಿ.16ರಿಂದ ಆರಂಭಗೊಂಡ ಧನು ಧನುಪೂಜೆ ಇಂದು ಮಕರ ಸಂಕ್ರಣದಂದು (ಜ.14)ರಂದು ಸಂಪನ್ನಗೊಂಡಿತು. ಸಾವಿರಾರು ಭಕ್ತರು ಧನುಪೂಜೆಯಲ್ಲಿ ಭಾಗವಹಿಸಿದರು.
ಪ್ರತಿವರ್ಷ ಧನುಪೂಜೆಯ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.ಅಂತೆಯೇ ಈ ವರ್ಷವು ಧನುಪೂಜೆಯ ಕೊನೆಯ ದಿನದಲ್ಲಿ ಭಕ್ತರು‌ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು.ಧನುಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಮುಂಜಾನೆ ಭಜನಾ ಸತ್ಸಂಗ ನಡೆಯಿತು. ಮಕರ ಸಂಕ್ರಮಣ ಪ್ರಯುಕ್ತ ಆಯಿರಕೊಡ ಅಭಿಷೇಕ ಮತ್ತು ಸಿಯಾಳಾಭಿಷೇಕ ಹಾಗೂ ಶತರುದ್ರಾಭಿಷೇಕ ರಾತ್ರಿ ರಂಗಪೂಜೆ ಜರುಗಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸಿಬ್ಬಂದಿಗಳು,ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top