ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ. 28 ರಂದು ಶ್ರೀ ದೇವರ ದರ್ಶನ ಬಲಿ ಹಾಗೂ ಬಟ್ಟಲು ಕಾಣಿಕೆ ಪ್ರಸಾದ ಶ್ರದ್ಧಾ ಭಕ್ತಿಯಿಂದ ಜರುಗಿತು.
ಬಳಿಕ ಶ್ರೀ ದೇವರಿಗೆ ಮಹಾಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಬಳಿಕ ಆಗಮಿಸಿದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಸಮಿತಿ ಪದಾಧಿಕಾರಿಗಳು ಮಾಜಿ ಅಧ್ಯಕ್ಷರು ಸದಸ್ಯರು, ಭಗವದ್ದ ಕ್ತರು ಉಪಸ್ಥಿತರಿದ್ದರು.
ಹಾಗೂ ಇಂದು ಸಂಜೆ ದೇವರಿಗೆ ರಂಗ ಪೂಜೆ ಬಳಿಕ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಸಂಸಾರ ಕಲಾವಿದೆರ್ ಪುತ್ತೂರು ಇವರಿಂದ ಭಕ್ತಿ ಪ್ರಧಾನ, ಹಾಸ್ಯ, ಸಾಮಾಜಿಕ ತುಳು ” ನಂಬಿಕೆ ದಾಯೆ” ನಾಟಕ ನಡೆಯಲಿದೆ.
ಸುಳ್ಯ : ವೈಭವದಿಂದ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ದರ್ಶನ ಬಲಿ

















