ಫೆ.9ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಪ್ರವರ್ತಿತ ಸಂಸ್ಥೆಯಾದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ದಿನಾಂಕ 09.02.1998ರಂದು ಸ್ಥಾಪನೆಯಾಗಿದ್ದು 09.02.2026 ರಂದು ಸಂಸ್ಥೆ ವತಿಯಿಂದ ಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ
ಎಂದು ಸೊಸೈಟಿ ಅಧ್ಯಕ್ಷರಾದ ಕೆ ಸಿ ಸದಾನಂದ ರವರು ತಿಳಿಸಿರುತ್ತಾರೆ.
ಅವರು ಫೆ. 6ರಂದು ಸೊಸೈಟಿ ಸಭಾವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.
ಸೊಸೈಟಿ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಕಾರ್ಯದರ್ಶಿಯಾಗಿ ಎ. ವಿ. ತೀರ್ಥರಾಮ, ಕೋಶಾಧಿಕಾರಿಯಾಗಿ ಪಿ ಸಿ ಜಯರಾಮರವರ ನೇತೃತ್ವದ ತಂಡ ನಮ್ಮ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕಿತ್ತು. ಈ ಸಂಸ್ಥೆಯ ಮುಖ್ಯ ಪ್ರವರ್ತಕರಾದ ಪಿ. ಸಿ ಜಯರಾಮ ರವರು ಸ್ಥಾಪಕ ಅಧ್ಯಕ್ಷರಾಗಿ ಮದುವೆಗದ್ದೆ ಭೋಜಪ್ಪ ಗೌಡ ರವರು ಸ್ಥಾಪಕ ಉಪಾಧ್ಯಕ್ಷರಾಗಿರುವ ತಂಡ ಸಂಸ್ಥೆಗೆ ಭದ್ರ ಬುನಾದಿ ಹಾಕಿತ್ತು. ನಂತರ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ ವಿ ತೀರ್ಥರಾಮ, ಚಂದ್ರಕೋಲ್ಟಾರ್. ಕೆ ಸಿ ನಾರಾಯಣ ಗೌಡ ಅಧ್ಯಕ್ಷರಾಗಿಯೂ, ಪಿ ಎಸ್ ಗಂಗಾಧರ್. ಮೋಹನ್‌ರಾಮ್ ಸುಳ್ಳಿರವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸುತ್ತ ಬ್ಯಾಂಕಿನ ಅಧ್ಯಕ್ಷರಾಗಿ ಕೆ ಸಿ ಸದಾನಂದ ಮತ್ತು ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಈ ಸಂಸೆಯು 23 ಶಾಖೆಗಳನ್ನು ಹೊಂದಿದ್ದು, 24 ನೇ ಶಾಖೆಯನ್ನು ದಿನಾಂಕ 15-02-2026 ರಂದು ಕೊಡಗಿನ ಮೂರ್ನಾಡ್‌ನಲ್ಲಿ ಪ್ರಾರಂಭಿಸಲಿದ್ದೇವೆ. ಸಂಘವು ಅತ್ಯುತ್ತಮವಾಗಿ ವ್ಯವಹಾರಗಳನ್ನು ಮಾಡುತ್ತಿದ್ದು ಒಟ್ಟು 22,600 ಸದಸ್ಯರು ಇದ್ದು, ವಾರ್ಷಿಕ ರೂ 1,300 ಕೋಟಿ ವ್ಯವಹಾರ ನಡೆಸುತ್ತಿದೆ. ಪ್ರತಿ ವರ್ಷವೂ ಕನಿಷ್ಠ 15% ಡಿವಿಡೆಂಟ್ ವಿತರಿಸುತ್ತಿದೆ. ಸಂಸ್ಥೆಯು ಸುಳ್ಯದಲ್ಲಿ 35.25 ಸೆಂಟ್ಸ್ ನಿವೇಶನ ಹೊಂದಿದ್ದು, ಇದರಲ್ಲಿ ಸುಳ್ಯ ಶಾಖೆ ಹಾಗೂ ಪ್ರಧಾನ ಕಛೇರಿಯನ್ನು ಒಳಗೊಂಡ ವಿಶಾಲವಾದ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿರುತ್ತೇವೆ. ಹಾಗೂ ಹಲವು ಕೊಠಡಿಗಳನ್ನು ಬಾಡಿಗೆಗೆ ನೀಡಿರುತ್ತೇವೆ.
ಈ ಸಂಸ್ಥೆಯಲ್ಲಿ 89 ಜನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಪಿಕ್ಕಿ ಸಂಗ್ರಾಹಕರು ಹಾಗೂ ಇತರರು ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಪ್ರಥಮ ಬಾರಿಗೆ ಸಂಸ್ಥೆಯ ಸ್ಥಾಪನಾ ದಿನಾಚರಣೆಯನ್ನು ಪ್ರಾರಂಭ ಮಾಡುತ್ತಿದ್ದು, ಇನ್ನು ಮುಂದಿನ ವರ್ಷಗಳಲ್ಲಿ ಪ್ರತಿ ವರ್ಷ ನಿಗದಿತ ದಿನ ಈ ಕಾರ್ಯಕ್ರಮ ನಡೆಯಲಿದೆ. ದಿನಾಂಕ 09.02.2026 ರಂದು ಪ್ರಧಾನ ಕಚೇರಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಭವನದಲ್ಲಿ ಪ್ರಥಮ ಸ್ಥಾಪನಾ ದಿನಾಚರಣೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು। ಭಾಗೀರಥಿ ಮುರುಳ್ಯರವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ರೈಸ್ತ ಅಲ್ಪಸಂಖ್ಯಾತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಸುಳ್ಯದ ಅಧ್ಯಕ್ಷರಾದ ಶ್ರೀ ವಿಲಿಯಮ್ ಲಸ್ರಾದೋ ಹಾಗೂ ಸುಳ್ಯ ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಮ್ ಮುಸ್ತಫಾರವರು ಉಪಸ್ಥಿತರಿರಲಿದ್ದಾರೆ. ಸ್ಥಾಪನಾ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ನಿರ್ದೇಶಕರನ್ನು ಗೌರವಿಸಲಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಸಂಸ್ಥೆಯ ಬೆಳವಣಿಗೆಗೆ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಅವರು ತಿಳಿಸಿದರು.
ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಮಾತನಾಡಿ ನಮ್ಮ ಸಂಸ್ಥೆ ರಾಜಕೀಯ ರಹೀತವಾಗಿ ನಡೆಯುತ್ತಿದೆ.ಇಲ್ಲಿ ಎಲ್ಲಾ ರಾಜಕೀಯ ಪಕ್ಷದವರಿದ್ದಾರೆ.ಅನುಭವವಿ ಸಹಕಾರಿ ದುರೀಣರಿದ್ದಾರೆ.ನಮ್ಮ ಸಂಸ್ಥೆಯ ಹಲವು ಮಂದಿಗೆ ಸಹಕಾರಿ ಪ್ರಶಸ್ತಿ ಬಂದಿವೆ‌ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಪಿ.ಸಿ ಜಯರಾಮ್,ಸದಾನಂದ ಮಾವಜಿ,
ಡಾ‌.ಜ್ಞಾನೇಶ್
ಲಕ್ಷ್ಮೀ ನಾರಾಯಣ ನಡ್ಕ,ದಾಮೋದರ ನಾರ್ಕೋಡು,ನಳೀನಿ ಸೂರಯ್ಯ,ದೊಡ್ಡಣ್ಣ ಬರೆಮೇಲು,ಪ್ರೇಮಾ ಕೆ.ಎಲ್ ,ಸಿ.ಒ ಕೆ.ಟಿ ವಿಶ್ವನಾಥ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top