ಅಡ್ತಲೆ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳಿಂದ ಇತ್ತೀಚಿಗೆ ವಿಪರೀತವಾಗಿ ಆಗುತ್ತಿರುವ ದಾಳಿಯ ಕುರಿತಂತೆ ಶಾಶ್ವತವಾಗಿ ಪರಿಹಾರ ಮಾಡಿಸುವಂತೆ ಇಲ್ಲಿಯವರೆಗೆ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಆಸಕ್ತಿ ತೋರಿಸದೇ ಇರುವುದನ್ನು ಮನಗಂಡು, ಇಲಾಖೆಯನ್ನು ಹಾಗೂ ಸರಕಾರವನ್ನು ಎಚ್ಚರಿಸುವ ಸಲುವಾಗಿ, ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ,ನೊಂದ ಕೃಷಿಕರ ಕೆಲವು ಬೇಡಿಕೆ ಈಡೇರಿಕೆಗಾಗಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ಸಂವಿಧಾನ ಬದ್ದ ಹಾಗೂ ಕಾನೂನು ಬದ್ದ ಸೌಲಭ್ಯ ಪಡೆಯಲು ಉದ್ದೇಶಿಸಿದ್ದು ಅದಕ್ಕಾಗಿ ನಾಳೆ ಆದಿತ್ಯವಾರ(08/02.2026) ಸಂಜೆ 3:30 ಕ್ಕೆ ಸರಿಯಾಗಿ ಅಡ್ತಲೆ ಶಾಲಾ ವಠಾರದ ಬಳಿ ಸಾರ್ವಜನಿಕರ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಪ್ರಸಾದ್ ಅಡ್ತಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಸಾರ್ವಜನಿಕರು ಸಭೆಯಲ್ಲಿ ಭಾಗಿಯಾಗಿ ಸೂಕ್ತ ಸಲಹೆಗಳನ್ನು ನೀಡಬೇಕಾಗಿ ವಿನಂತಿಸಿಕೊಂಡದ್ದಾರೆ.ಅಲ್ಲದೆ ವೇದಿಕೆಗೆ ಬೆಂಬಲ ಕೋರಿ ನೆರೆಯವ ಗ್ರಾಮ ಗಳಿಂದಲೂ ಕರೆ ಬಂದಿದ್ದು, ದೃಶ್ಯ ಹಾಗೂ ಮುದ್ರಣ ಮಾಧ್ಯಮ ಮಿತ್ರರು ಬರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ, ಮಹಿಳೆಯರು ಸೇರಿದಂತೆ ಪ್ರತಿ ಮನೆಯ ಸದಸ್ಯರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದಲ್ಲಿ ವೇದಿಕೆಗೆ ಸ್ಫೂರ್ತಿ ಕೊಟ್ಟಂತೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಕ್ರಮಕ್ಕೆ ಒತ್ತಾಯಿಸಿ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆಗೆ ನಿರ್ಧಾರ



































