ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಡ್ಡನಪಾರೆ ಎಂಬಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಫೆ.12ರಂದು ಸಂಜೆ ವರದಿಯಾಗಿದೆ.
ಅಡ್ಡನಪಾರೆ ನಿವಾಸಿ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ (27 ವರ್ಷ) ಎಂಬವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಹಾಬಲ ಫೆ.4ರಂದು ರಾತ್ರಿಮದ್ಯ ಸೇವಿಸಿ ಬಂದು ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರೆನ್ನಲಾಗಿದೆ.
ನಾಪತ್ತೆಯಾಗಿದ್ದ ಮಹಾಬಲ ಅವರ ಮೃತದೇಹ ಅವರ ಮನೆಯ ಬಳಿಯ ವಾಸವಿಲ್ಲದ ಮನೆಯೊಂದರ ಶೌಚಾಲಯದ ಒಳಗೆ ಪತ್ತೆಯಾಗಿತ್ತು.
ಸ್ಥಳೀಯ ಮನೆಯವರು ವಾಸನೆ ಬರುತ್ತಿರುವುದನ್ನು ಗಮನಿಸಿ, ಶೌಚಾಲಯದೊಳಗೆ ನೋಡಿದಾಗ ಮೃತದೇಹ ಕಂಡು ಬಂತು.
ಬಳಿಕ ಅವರ ಮನೆಯವರಿಗೆ ವಿಷಯ ತಿಳಿಸಿ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಾಗಿದೆ.ಮಹಾಬಲ ಮನೆಗೆ ಬೆಂಕಿ ಹಚ್ಚಿರುವ ಬಗ್ಗೆ ಪತ್ಯಕ ಪ್ರಕರಣ ದಾಖಲಾಗಿದೆ.ಅವಿವಾತಹರಾದ ಅವರು ತಂದೆ ತಾಯಿಯನ್ನು ಅಗಲಿದ್ದಾರೆ.
ಗುತ್ತಿಗಾರು : ತನ್ನ ಮನೆಗೆ ಬೆಂಕಿ ಹಚ್ಚಿದ ಯುವಕನ ಶವ ಶೌಚಾಲಯದೊಳಗೆ ಪತ್ತೆ!

















