ನಾಳೆ ಪಂಜ ಸೀಮೆ ದೇವಸ್ಥಾನವಾದ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪಂಜ ಸೀಮೆ ದೇವಸ್ಥಾನವಾದ ಸದಾಶಿವ ಪರಿವಾರ ಪಂಚಲಿಂಗೇಶ್ವರ ಪಂಜ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.15ರಂದು ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದರು.
ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8 ಗಂಟೆಯ ತನಕ ವಿವಿಧ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.
ರಾತ್ರಿ 8.00ರಿಂದ 9-45ರ ತನಕ ಶ್ರೀ ದೇವರಿಗೆ ಏಕಾದಶರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಪಾರಾಯಣ ನಡೆಯಲಿದೆ. ರಾತ್ರಿ 10ಗಂಟೆಗೆ ಮಹಾಪೂಜೆ ನಡೆಯಲಿದೆ.
ಮಧ್ಯಾಹ್ನ ಸರ್ವಸೇವೆ, ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ ರುದ್ರಾಭಿಷೇಕ, ರಾತ್ರಿ ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ಸೇವೆಗಳು ನಡೆಯಲಿದೆ.
ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ಧರ್ಮಪಾಲ ಕರಂದ್ಲಾಜೆ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ (ನ್ಯಾಯವಾದಿಗಳು) ಇವರ ನೇತೃತ್ವದಲ್ಲಿ ವ್ಯವಸ್ಥಪನಾ ಸಮಿತಿಯ ಸದಸ್ಯರು ಹಾಗೂ ಚಾರ್ವಾಕದ ಭಕ್ತಾಧಿಗಳು ಹಾಗೂ ಊರ ಭಕ್ತಾಧಿಗಳು ಪಾದಯಾತ್ರೆಯ ಮೂಲಕ ಚಾರ್ವಾಕ, ಎಡಮಂಗಲ, ಪುಳಿಕುಕ್ಕು ಮಾರ್ಗವಾಗಿ ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಬರುವ ಪಾದಯಾತ್ರೆಯ ಭಕ್ತಾದಿಗಳನ್ನು ಪೂರ್ವಾಹ್ನ 11.00 ಗಂಟೆಗೆ ಪಂಜ ಪೇಟೆಯ ದ್ವಾರದ ಬಳಿಯಲ್ಲಿ ಸ್ವಾಗತಿಸಿ, ಶ್ರೀ ದೇಗುಲಕ್ಕೆ ಪಾದಯಾತ್ರೆಯಲ್ಲಿ ಬರುವವರಿದ್ದು, ಊರ ಭಕ್ತಾದಿಗಳೆಲ್ಲರೂ ಭಾಗವಹಿಸಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top