ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಯವರನ್ನು ಸುಪ್ರೀತ್ ಮೋoಟಡ್ಕ ರವರು ಸಚಿವರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಹಳದಿ ರೋಗ ಹಾಗೂ ಚುಕ್ಕಿರೋಗ ಬಾಧೆ ಕುರಿತು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ವಿನಂತಿ ಮಾಡಿ ಮನವಿ ಸಲ್ಲಿಸಿದರು.ಈ ಬಾರಿ ರಾಜ್ಯ ಬಜೆಟ್ನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.ಸುಳ್ಯ ಕ್ಷೇತ್ರದಲ್ಲಿ ಅಡಿಕೆ ಬೆಳೆಗೆ ತೀವ್ರವಾಗಿ ಹಳದಿ ರೋಗ ಹಾಗೂ ಎಲೆ ಚುಕ್ಕಿರೋಗ (ಎಲೆ ಚಿಕ್ಕಿ ರೋಗ) ವ್ಯಾಪಕವಾಗಿ ಹರಡಿಕೊಂಡಿದ್ದು ಇದರಿಂದ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕ್ಷೇತ್ರದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ವಿಶೇಷವಾಗಿ ಅಡಿಕೆ ಬೆಳೆ ಮುಖ್ಯ ಆದಾಯದ ಮೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ರೋಗಬಾಧೆಯಿಂದ ಬೆಳೆ ನಾಶವಾಗುತ್ತಿದ್ದು, ಕೃಷಿಕರ ಜೀವನೋಪಾಯ ಕಷ್ಟಕರ ಪರಿಸ್ಥಿತಿಗೆ ತಲುಪಿದೆ.ಆದ್ದರಿಂದ, ಈ ಬಾರಿ ಬಜೆಟ್ನಲ್ಲಿ ಕೆಳಕಂಡಂತೆ ವಿಶೇಷ ಪ್ಯಾಕೇಜ್ ಘೋಷಿಸಲು ವಿನಂತಿಸುತ್ತೇವೆ: ಹಳದಿ ರೋಗ ಮತ್ತು ಎಲೆ ಚುಕ್ಕಿರೋಗ ನಿಯಂತ್ರಣಕ್ಕೆ ವಿಶೇಷ ಅನುದಾನ. ತಜ್ಞರ ತಂಡದಿಂದ ತಕ್ಷಣದ ಸಮೀಕ್ಷೆ ಹಾಗೂ ಶಾಶ್ವತ ಪರಿಹಾರ ಕ್ರಮಗಳು. ನಷ್ಟ ಪರಿಹಾರಧನವನ್ನು ನೇರವಾಗಿ ಕೃಷಿಕರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಮತ್ತು ಸಾಲ ಮನ್ನಾ ಪರಿಗಣನೆ. ರೋಗ ನಿರೋಧಕ ತಳಿಗಳ ಸಂಶೋಧನೆ ಮತ್ತು ಉಚಿತ ಸಸಿಗಳ ವಿತರಣೆ. ಕೃಷಿಕರ ಹಿತದೃಷ್ಟಿಯಿಂದ ಈ ಮನವಿಯನ್ನು ಸಹಾನುಭೂತಿಯೊಂದಿಗೆ ಪರಿಗಣಿಸಿ, ಸುಳ್ಯ ಕ್ಷೇತ್ರದ ರೈತರಿಗೆ ಸ್ಪಂದಿಸಬೇಕಾಗಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಸಚಿವರಾದ ಚಲುವರಾಯ ಸ್ವಾಮಿ ಯವರು ಇದರ ಬಗ್ಗೆ ಕೂಡಲೇ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆಯುವದಾಗಿ ತಿಳಿಸಿದರು.
ಹಳದಿ ರೋಗ ಹಾಗೂ ಎಲೆಚುಕ್ಕಿ ಬಾಧೆಗೆ ವಿಶೇಷ ವ್ಯಾಕೇಜ್ ಘೋಷಿಸಲು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ಸುಪ್ರಿತ್ ಮೋಂಟಡ್ಕ



































