ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಗೆ ನೂತನ ಖಾಝಿ ನೇಮಕಕ್ಕೆ ತೀರ್ಮಾನ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ ವಿಶೇಷ ಸಭೆಯು ಜು.7 ರಂದು ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಮಂಗಳೂರು ಖಾಝಿ ಬಹು| ತ್ವಾಖಾ ಅಹಮ್ಮದ್ ಮುಸ್ಲಿಯಾರ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಯಾಸೀನ್ ಪಾರಾಯಣ ಹಾಗೂ ವಿಶೇಷ ದುವಾ ನಡೆಸಲಾಯಿತು. ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಗೆ ನೂತನ ಖಾಝಿಯಾಗಿ ಸಯ್ಯದುಲ್ ಉಲಮಾ ಬಹು| ಜಿಫ್ರಿ ಮುತ್ತುಕೋಯ ತಂಘಳ್ ರವರನ್ನು ನೇಮಕ ಮಾಡಲು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕಾಗಿ ಖಾಝಿ ನೇಮಕ ಸಮಿತಿಯನ್ನು ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿಯವರ ನೇತೃತ್ವದಲ್ಲಿ ರಚಿಸಲಾಯಿತು. ಹಮೀದ್ ಹಾಜಿ ಸುಳ್ಯ, ತಾಜ್ ಮೊಹ್ಮದ್ ಸಂಪಾಜೆ, ಹಾಜಿ ಹೆಚ್.ಎ ಅಬ್ಬಾಸ್ ಸೆಂಟ್ಯಾರ್, ಹಾಜಿ ಅಬೂಬಕ್ಕರ್ ಮಂಗಳ, ಹಾಜಿ ಅಬ್ದುಲ್ಲ ಪಳ್ಳಿಕೆರೆ ಅಜ್ಜಾವರ, ಜಮಾಲ್ ಬೆಳ್ಳಾರೆ ಸಮಿತಿ ಸದಸ್ಯರಾಗಿದ್ದಾರೆ. ಸಂಪಾಜೆ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಮೀದಿಯ, ದುಗ್ಗಲಡ್ಕ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಅಜ್ಜಾವರ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲ ಪಳ್ಳಿಕೆರೆ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಅತ್ತಿಕೆರೆ ಮಜಲು ಜಮಾಅತ್ ಉಪಾಧ್ಯಕ್ಷ ಶರೀಫ್ ಭಾರತ್, ಐವರ್ನಾಡು ಜಮಾಅತ್ ಅಧ್ಯಕ್ಷ ಶರೀಫ್ ನಿಡುಬೆ, ಹಾಜಿ ಅಹ್ಮದ್ ಸುಪ್ರಿಮ್, ಹಾಜಿ ಅಹ್ಮದ್ ಪಾರೆ, ಯು.ಪಿ ಬಶೀರ್ ಬೆಳ್ಳಾರೆ, ಹಸೈನಾರ್ ಅಜ್ಜಾವರ, ಶೌಖತ್ ಅಜ್ಜಾವರ, ಮಹ್ಮದ್ ಸಲಾಂ ಅಜ್ಜಾವರ, ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಹಂಸ ದುಗ್ಗಲಡ್ಕ, ಅಬ್ದುಲ್ ಖಾದರ್ ಸಂಪಾಜೆ ಇಸ್ಮಾಯಿಲ್ ಸಂಪಾಜೆ, ಮೂಸೆ ಕುಂಇ’ ದುಗ್ಗಲಡ್ಕ, ಅಬೂಬಕ್ಕರ್ ಐವರ್ನಾಡು ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



























































































































Leave a Comment

Your email address will not be published. Required fields are marked *

error: Content is protected !!
Scroll to Top