ಮರ್ಕಂಜ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ
ಅರಂತೋಡು, ಜ.24 : ಮರ್ಕಂಜ ಗ್ರಾಮದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜನವರಿ 24 ರಿಂದ 31 ರವರೆಗೆ ಜಾತ್ರೋತ್ಸವವು ನಡೆಯಲಿದ್ದು , ಇಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು . ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ , ಸದಸ್ಯರಾದ ರಾಜೇಶ್ವರಿ ಕುಮಾರಸ್ವಾಮಿ , ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು , ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮನೋಹರ ರೈ ಹೈದಂಗೂರು , ಅರ್ಚಕರಾದ ಸುಬ್ರಹ್ಮಣ್ಯ ಭಟ್ ಹಾಗೂ ದೇವಳದ ವಿವಿಧ ಸಮಿತಿಗಳ ಸದಸ್ಯರಾದ ಕುಮಾರಸ್ವಾಮಿ ರೆಂಜಾಳ , ಜಗಮ್ಮೋಹನ ರೈ , ರಾಮಕೃಷ್ಣ ರಾವ್ ರೆಂಜಾಳ , ಚಿನ್ನಪ್ಪ ಗೌಡ ಬೇರಿಕೆ , ಲಕ್ಷ್ಮೀ ನಾರಾಯಣ ರಾವ್ ರೆಂಜಾಳ , ದಿನೇಶ್ ಕೊರತ್ತೋಡಿ , ಶಶಿಕಾಂತ ಗುಳಿಗಮೂಲೆ , ಕೇಶವ ಗೌಡ ಜೋಗಿಮೂಲೆ , ಅಣ್ಣು ಕಟ್ಟಕೋಡಿ , ಪ್ರವೀಣ ಬಾಣೂರು , ಬಾಲಕೃಷ್ಣ ಜೋಗಿಮೂಲೆ ಮೊದಲಾದವರು ಉಪಸ್ಥಿತರಿದ್ದರು .