ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸಿ ನಾವು ಒಗ್ಗಟ್ಟಾಗುವ ಅಗತ್ಯ ಇದೆ.ನಮ್ಮ ಮೂಲವನ್ನು ನಾವು ಯಾವತ್ತು ಮರೆಯಬಾರದೆಂದು ನಿವೃತ್ತ ಶಿಕ್ಷಕ ದೇವಯ್ಯ ಮಾಸ್ತರ್ ಉಳುವಾರು ಹೇಳಿದರು.
ಅವರು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿಯಿಂದ ಇದರ ಹತ್ತು ಕುಟುಂಬ ಹದಿನೆಂಟು ಗೊತ್ರದ ವ್ಯಾಪ್ತಿಗೆ ಒಳಪ್ಟ 8 ನೇ ವರ್ಷದ ಗ್ರಾಮ ಮಟ್ಟದ ಕ್ರಿಡೋತ್ಸವನ್ನು ತೊಡಿಕಾನ ಸರಕಾರಿ ಹಿರಿಯ
ಶಾಲಾ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರು
ಹಿರಿಯರಾದ ನಾಗಪ್ಪ ಗೌಡ ಬಾಳಕಜೆ ಮಾತನಾಡಿ ನಮ್ಮ ಗೌಡರ ಮೂಲ ಸಂಪ್ರದಾಯಗಳನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಕಿರಿಯರಿಂದ ನಡೆಯಬೇಕು ಎಂದು ಹೇಳಿದರು.ತೊಡಿಕಾನ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ಮಾತನಾಡಿ ವರ್ಷಕ್ಕೆ ಒಂದು ಬಾರಿ ನಡೆಯುವ ಕ್ರಿಡೋತ್ಸವ ಕಾರ್ಯಕ್ರಮದಲ್ಲಿ ಮುಂದಿನ ಅವಧಿಯಲ್ಲಿ ಇನ್ನಷ್ಟು ಹೆಚ್ಚು ಜನ ಸೇರಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕೆಂದು ಹೇಳಿದರು. ಗೌಡ ಗ್ರಾಮ ಸಮಿತಿ ಅಧ್ಯಕ್ಷ ರಮಾನಂದ ಗೌಡ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ನಾಗಪ್ಪ ಗೌಡ ಬಾಳಕಜೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಬಳಿಕ ಕ್ರೀಡಾಕೂಟ ನಡೆಯಿತು.ಸಂಜೆ ಸಮರೋಪ ಸಮಾರಂಭ ನಡೆಯಿತು.ಸಮರೋಪ ಸಮಾರಂಭದಲ್ಲಿ ಮಾತನಾಡಿದ ಗೌಡರ ಯುವ ಸೇವಾ ಸಂಘ ಸುಳ್ಯ ಜಿಲ್ಲಾಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ
ಅಧುನಿಕ ಕಾಲಘಟ್ಟದಲ್ಲಿ ವೈಜ್ಞಾನಿಕದ ಕಪಿಮುಷ್ಠಿಗೆ ನಾವು ಸಿಲುಕಿಕೊಂಡು ತಮ್ಮ ಸಂಸ್ಕ್ರತಿ ಆಚಾರ ವಿಚಾರಗಳಿಂದ ನಾವು ದೂರ ಸರಿಯುತ್ತಿದೆ.ಅಧುನಿಕತಗೆ ನಾವು ಅತೀಯಾಗಿ ದಾಸರಾಗದೆ ನಾವು ನಮ್ಮ ತನವನ್ನು ಉಳಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.
ಉಳುವಾರು ತರವಾಡು ಮನೆ ಅಧ್ಯಕ್ಷ ಪುರುಶೋತ್ತಮ ಮಾತನಾಡಿ ನಮ್ಮ ಸಂಸ್ಕ್ರತಿಗಳನ್ನು ನಾವು ತಮ್ಮ ಮಕ್ಕಳಿಗೆ ಕಲಿಸಿಕೊಡುವ ಅಗತ್ಯ ಇದೆ.ಇದರಿಂದ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.
ಊರು ಗೌಡರಾದ ತೀರ್ಥರಾಮ ಗೌಡ ಪರ್ನೋಜಿ ಚಮಾತನಾಡಿ ನಮ್ಮ ಮುದಾಯದ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನರು ಭಾಗವಹಿಸುವ ಅಗತ್ಯ ಇದೆ ಎಂದು ಹೇಳಿದರು
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ರಾಮನಂದ ಗೌಡ ಬಾಳಕಜೆಯವರು ನಾವು ಇಂದು ನಮ್ಮ ಸಮುದಾಯದವರಿಗೆ ಸಂಬಂಧಪಟ್ಟಂತೆ ವಿವಾಹದ ಕರಾರು ಪತ್ರ ಬಿಡುಗಡೆ ಮಾಡಿದ್ದೇವೆ ಇದರ ಸದುಪಯೋಗವನ್ನು ಸಮುದಾಯದವರು ಪಡೆದುಕೊಳ್ಳಬೇಕೆಂದು ಹೇಳಿದರು.
ಸರಕಾರಿ ನೌಕರಾಗಿ ಸೇವೆಯಿಂದ ನಿವೃತ್ತಿಗೊಂಡ ಸಣ್ಣಯ್ಯ ಗೌಡ ಕುಂಟುಕಾಡು ಹಾಗೂ ಕಟ್ಟೆಹೊಳೆ ರಾಮಚಂದ್ರಗೌಡ ಅವರನ್ನು ಸನ್ಮಾನಿಸಲಾಯಿತು.
ಕ್ರಿಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮದುವೆ ಕಾರ್ಯಕ್ಕೆ ಸಂಬಂದ ಪಟ್ಟ ಕರಾರು ಪತ್ರ ಬಿಡುಗಡೆಗೊಳಿಸಲಾಯಿತು.
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ನಿರ್ದೇಶಕ ತೇಜಪ್ರಸಾದ್,ಪಟ್ಟಿ ಅಯ್ಯಪ್ಪ ದೇವಳದ ಅಧ್ಯಕ್ಷ ಸಣ್ಣಯ್ಯ ಗೌಡ ಅಮೆಮನೆ,ಶೇಷಪ್ಪ ಗೌಡ ಬಾಳೆಕಜೆ,
ಕ್ರಷಿಕ ಶ್ರೀನಿವಾಸ ಗೌಡ ಮೆತ್ತಡ್ಕ, ಊರು ಗೌಡರಾದ ಬಾಲಕೃಷ್ಣ ಗೌಡ ಕುಂಟುಕಾಡು, ,ಯು.ಕೆ ಮೋಹನ ಗೌಡ ಕೊಳಲುಮೂಲೆ,ಬಿ.ಎಸ್ ಮೋನಪ್ಪ ಗೌಡ ಬಾಳಕಜೆ, ಲಕ್ಷ್ಮಣ ಗೌಡ ಕಲ್ಲಗದ್ದೆ, ಲಿಂಗಪ್ಪ ಗೌಡ ಕುಂಟುಕಾಡು,ಗೊವರ್ಧನ ಬೊಳ್ಳುರು,ಶಿಕ್ಷಕ ಬಾಲರಾಜ್, ತೊಡಿಕಾನ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಬೋಜಪ್ಪ ಗೌಡ,ಪ್ರಭಾಕರ ಗೌಡ ಕಾಡು ಪಂಜ ,ಗ್ರಾಮ ಸಮಿತಿ ಕಾರ್ಯದರ್ಶಿ ರಾಧಾಕ್ರಷ್ಣ ಪಾರೆಮಜಲು ಇತರರು ಉಪಸ್ಥಿತರಿದ್ದರು.