ಆತ್ಮೀಯ ಮತದಾರ ಬಂಧುಗಳ ಪ್ರೀತಿಪೂರ್ವಕ ನಮಸ್ಕಾರಗಳು
ನಾನು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ರಾಮಕುಂಜ ದಿ| ಪೂವಪ್ಪ ರವರ ಪುತ್ರಿ ಬಿ. ಮೋಹಿನಿ ವಿವಾಹವಾಗಿ ರಾಮಕುಂಜದ ಶಾರದ ನಗರ ಎಂಬಲ್ಲಿ ಖಾಯಂ ವಾಸ್ತವ್ಯ ಹೊಂದಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿ ಪವಿತ್ರ ಸಂವಿಧಾನ ತತ್ವ ಆದರ್ಶಗಳು, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿನಲ್ಲಿ ಆಚಲವಾದ ನಂಬಿಕೆ ಇರಿಸಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಕಳೆದ 8 ವರ್ಷಗಳಿಂದ ಕೆಪಿಸಿಸಿ ಸಂಯೋಜಕನಾಗಿ ಸುಳ್ಯ ಕ್ಷೇತ್ರಕ್ಕೆ ನಿಯುಕ್ತಿತ್ತಿಗೊಂಡು ಸುಳ್ಯ ಕ್ಷೇತ್ರದಾದ್ಯಂತ ಪಕ್ಷದ ಮತ್ತು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದೇನೆ.
ನಾನು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ ವರೆಗೆ ಬೆಂಗಳೂರಿನ ಹೆಸರಾಂತ ಸರಕಾರಿ ವಿಜ್ಞಾನ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವ್ಯಸಂಗ ಮಾಡಿ M.Sc., M.A (RURAL DEVOLOPMENT) ಪದವಿ ಪಡೆದಿರುತ್ತೇನೆ.ಕಳೆದ 35 ವರ್ಷಗಳಿಂದ ರಾಜಕೀಯ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿರುವ ನಾನು NSUI(ಅಖಿಲ ಭಾರತ ವಿಧ್ಯಾರ್ಥಿ ಕಾಂಗ್ರೆಸ್) ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಯುವಕ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷನಾಗಿ,KPCC ಸದಸ್ಯನಾಗಿ,KPCC ಸಂಯೋಜಕನಾಗಿ ಕಾರ್ಯನಿರ್ವಹಿಸಿರುತ್ತೇನೆ. ರಾಷ್ಟ್ರೀಯ ಸ್ಟೀಲ್ ಗ್ರಾಹಕರ ಕೌನ್ಸಿಲ್ ನ ಪ್ರಾದೇಶಿಕ ಸಮಿತಿಯ ಸದಸ್ಯನಾಗಿ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಮಿಕ ಭವಿಷ್ಯ ನಿಧಿ ಪ್ರಾದೇಶಿಕ ಸಮಿತಿ ಸದಸ್ಯನಾಗಿ ದುಡಿದಿರುವ ಅನುಭವ ಹೊಂದಿರುತ್ತೇನೆ. ಕಳೆದ ಕೊರೋನಾ ಕಾಲಘಟ್ಟದಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾದಾಗ ಆರೋಗ್ಯ ಸೇವೆಯನ್ನು ಕಲ್ಪಿಸಲು ಸ್ವಂತ ಖರ್ಚಿನಿಂದ ಸಂಪೂರ್ಣ ಉಚಿತ ಆಂಬುಲೆನ್ಸ್ ಸೇವೆಯನ್ನು ಒದಗಿಸಿ,ಸಾವಿರಾರು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಮತ್ತು ಕಾರ್ಮಿಕರಿಗೆ ಊಟೋಪಚರವನ್ನು ಪೂರೈಸುವ ಮೂಲಕ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿರುತ್ತೇನೆ.ಅಲ್ಲದೆ ಕ್ಷೇತ್ರದ ಜನ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದಾಗ ಆರ್ಥಿಕವಾಗಿ ಮತ್ತು ವಸ್ತುರೂಪದಲ್ಲಿ ಅರ್ಹ ಕುಟುಂಬಗಳಿಗೆ ನನ್ನ ಶಕ್ತಿ ಮೀರಿ ನೆರವಾಗಿರುತ್ತೇನೆ.ಕರೋನ ಮುಂಚೂಣಿ ವಾರಿಯರ್ಸ್ ಗಳಿಗೆ ಮೆಡಿಕಲ್ ಕಿಟ್ ಆಕ್ಸಿಜನ್ ಪೂರೈಕೆಯಲ್ಲಿ ಸಹಾಯ ಹಸ್ತ ನೀಡಿರುತ್ತೇನೆ.
ಸುಳ್ಯ ವಿಧಾನಸಭಾ ಕ್ಷೇತ್ರವು ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಒಳಗೊಂಡ ವಿಶ್ವವಿಖ್ಯಾತ ಶೈಕ್ಷಣಿಕ, ಕೃಷಿ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾಣದ ಹಿಂದುಳಿದ ಗ್ರಾಮೀಣ ಮಲೆನಾಡು ಪ್ರದೇಶ ವಾಗಿರುತ್ತದೆ. ದಶಕಗಳು ಕಳೆದರೂ ಇಲ್ಲಿನ ಪ್ರಮುಖ ಸಮಸ್ಯೆಗಳಾದ ಸಂಪರ್ಕ ಸೇತುವೆ.ರಸ್ತೆ,ಕುಡಿಯುವ ನೀರು, ವಿದ್ಯುತ್, ಉದ್ಯೋಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ, ನಿರೀಕ್ಷಿತ ಕಾರ್ಯಗಳು ಆಗದೆ ಇರುವುದು ದುರದ್ರಿಷ್ಟಕರ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಈ ಕ್ಷೇತ್ರಗಳ ಪ್ರಮುಖ ಸಮಸ್ಯೆಗಳಾದ ಅಂಬೇಡ್ಕರ್ ಭವನ, ತಾಲೂಕು ಕ್ರೀಡಾಂಗಣ ನಿರ್ಮಾಣ,110 ಕೆ.ವಿ ವಿದ್ಯುತ್ ಲೈನ್, ಕೈಗಾರಿಕಾ ವಲಯ ಸ್ಥಾಪನೆ,ಗಡಿ ರಾಜ್ಯಗಳ ರಸ್ತೆಗಳ ಅಭಿವೃದ್ಧಿ ಶರವೇಗದಲ್ಲಿ ನಡೆಯಬೇಕಾಗಿದೆ.ಅಲ್ಲದೆ ಇಲ್ಲಿನ ಕೃಷಿಕರ ಜೀವನಾಡಿ ಅಡಿಕೆ,ರಬ್ಬರ್,ತೆಂಗು ಕೃಷಿಗಳ ಸಮಸ್ಯೆಗಳನ್ನು ನೀಗಿಸಿ ರೈತರಿಗೆ ನೆರವಾಗಬೇಕಾಗಿದೆ. ಪ್ರಮುಖ ಸಮಸ್ಯೆಗಳಾದ ಅಡಿಕೆ ಮರಗಳಿಗೆ ತಗಳಿದ ಹಳದಿ ರೋಗ,ಎಲಚುಕ್ಕಿ ರೋಗ ನಿವಾರಣೆ ಮತ್ತು ಕಸ್ತೂರಿರಂಗನ್ ವರದಿ ಅನುಷ್ಠಾನದಲ್ಲಿ ರೈತರಿಗೆ ನ್ಯಾಯ ಒದಗಿಸಬೇಕಾಗಿದೆ. ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪಡೆದಿರುವ ನಾನು ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಸಮಸ್ಯೆಗಳ ನಿವಾರಣೆ ಮತ್ತು ಸಮಗ್ರ ಅಭಿವೃದ್ಧಿ ಪರಿಕಲ್ಪನೆಯನ್ನು ಅಧ್ಯಯನ ಮಾಡಿರುತ್ತೇನೆ.ರಬ್ಬರ್,ತೆಂಗು ಕೃಷಿಗಳಿಗೆ ಬೆಂಬಲ ಬೆಲೆ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿ ರೈತರ ಬದುಕನ್ನು ಅಸನಾಗಿಸಬೇಕಾಗಿರುವುದು ಅತ್ಯಾವಶ್ಯಕವಾಗಿರುತ್ತದೆ. ತಮ್ಮ ಸೇವೆಯನ್ನು ಮಾಡಲು ಈ ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಸೌಭಾಗ್ಯವಾಗಿರುತ್ತದೆ.
ಕಳೆದ 28 ವರ್ಷಗಳಿಂದ ಒಂದೇ ಪಕ್ಷದ ಶಾಸಕರನ್ನು ಕಾಣುತ್ತಿದ್ದ ತಾವು ಈ ಬಾರಿ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಾಗಿ ಎಲ್ಲಾ ಸಮೀಕ್ಷೆಗಳು ವರದಿ ನೀಡುತ್ತಿರುವ ಈ ಸಂದರ್ಭದಲ್ಲಿ ಸುಳ್ಯದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಜಯನ್ನಾಗಿ ಮಾಡಿ ಸರ್ಕಾರದ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಪಣತೊಡಬೇಕಾಗಿದೆ.ನಾನು ನಿಮ್ಮ ಬಳಿ ಮತಯಾಚನೆಗೆ ಬರುವವನಿದ್ದು,ನಿಮ್ಮ ಬಳಿ ತಲುಪಲು ಅಸಾಧ್ಯವಾದಲ್ಲಿ ಈ ಮೆಸೇಜ್ ನನ್ನ ವೈಯಕ್ತಿಕ ಉಪಸ್ಥಿತಿ ಎಂದು ಪರಿಗಣಿಸಿ ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಕ್ರಮಸಂಖ್ಯೆ 1 ಕೈ ಚಿನ್ನೆಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ನನ್ನನ್ನು ವಿಧಾನಸಭೆಗೆ ಸುಳ್ಯ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ.
ಇತಿ ನಿಮ್ಮ ಪ್ರೀತಿಯ
ಜಿ.ಕೃಷ್ಣಪ್ಪ ರಾಮಕುಂಜ
M.Sc., MA(RURAL DEVOLOPMENT)
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ