ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡು ರಾವ್ ರವರನ್ನು ಇಂದು ಮಂಗಳೂರಿನಲ್ಲಿ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಮತ್ತು ಗೂನಡ್ಕದ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆ ಮತ್ತು ಸಂಸ್ಥೆಯು ಬಿಡುಗಡೆ ಮಾಡಿದ ಬೆಳೆಕಿನೆಡೆಗೆ ಹತ್ತು ಮುಸ್ಲಿಂ ಕತೆಗಳ ಪುಸ್ತಕವನ್ನು ನೀಡಿ ಮಂಗಳೂರಿನಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಎಂ ಎಲ್ ಸಿ, ಮಾಜಿ ಸಚಿವ ಅಭಯ ಚಂದ್ರ ಜೈನ್, ಐವನ್ ಡಿ ಸೋಜ,ಕವಿತಾ ಸನಿಲ್,ಪ್ರತಿಭಾ ಕುಳಾಯಿ,ನಾಸಿರ್ ಲಕ್ಕಿ ಸ್ಟಾರ್,ಸುಳ್ಯ ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ್, ಶಾಹುಲ್ ಹಮೀದ್,ಪಿ ಎಸ್ ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ,ಸುರೇಶ ಅಮೈ,ತೆಕ್ಕಿಲ್ ಪ್ರತಿಷ್ಟಾನದ ಉಪಾಧ್ಯಕ್ಷರಾದ ಶಾಜ್ ತೆಕ್ಕಿಲ್,ಬ್ಲಾಕ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಎನ್ ಎಸ್ ಯು ಐ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ,ಎನ್ ಎಸ್ ಯು ಐ ಸುಳ್ಯ ಅಧ್ಯಕ್ಷರಾದ ಕೀರ್ತನ್ ಗೌಡ ಮೊದಲಾದವರು ಉಪಸ್ಥಿತರಿದ್ದರು.