ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸಿನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಿದ್ದು ‘ಕೃಷ್ಣಪ್ಪ ಹಠಾವೋ ಸುಳ್ಯ ಕಾಂಗ್ರೇಸ್ ಬಚಾವೋ’ ಎಂಬ ಪೋಸ್ಟರ್ ಹರಿದುಬಿಡುತ್ತಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂದು ಆರೋಪಿಸಿ ತಾ. ಪಂ ಮಾಜಿ ಸದಸ್ಯೆಯರಿಬ್ಬರ ಸಹಿತ 17 ಮಂದಿಯನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಇದರಿಂದ ಸುಳ್ಯ ಕಾಂಗ್ರೆಸ್ ನಲ್ಲಿ ಅಂತರಿಕ ಭಿನ್ನಾಭಿಪ್ರಾಯ ಹೆಚ್ಚಿದೆ.
ಉಚ್ಛಾಟನೆಗೊಂಡ ಕಾರ್ಯಕರ್ತರು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷೊಯಾಗಿದ್ದ ನಂದಕುಮಾರ್ ಜೊತೆ ಗುರುತಿಸಿಕೊಂಡಿದ್ದರು. ಆದರೆ ಟಿಕೇಟ್ ಘೋಷಣೆ ಆದ ನಂತರ ಕೃಷ್ಣಪ್ಪರಿಗೆ ದುಡಿದಿದ್ದರು ಎನ್ನಲಾಗಿದೆ.
ಕಡಬ ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್, ಆಶಾ ಲಕ್ಷ್ಮಣ್ ಗುಂಡ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ, ಕುಟ್ರುಪ್ಪಾಡಿ ಗ್ರಾ.ಪಂ ಮಾಜಿ ಸದಸ್ಯ ಸೇವಿಯರ್ ಬೇಬಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ದೇವಾಡಿಗ, ಎಪಿಎಂಸಿ ಮಾಜಿ ಸದಸ್ಯ ರಾಮಕೃಷ್ಣ ಕೆಂಜಾಳ, ಕಡಬ ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಶಶಿಧರ ಬೊಟ್ನಡ್ಕ, ಕಡಬ ಯುವ ಕಾಂಗ್ರೆಸ್ ಮುಖಂಡ ಪೈಜಲ್ ಕಡಬ, ಜೈನ್ ಆತೂರು, ರವಿ ರುದ್ರಪಾದ, ಶೋಬಿತ್ ಸುಬ್ರಹ್ಮಣ್ಯ, ಮಹೇಶ್ ಭಟ್ ಕರಿಕ್ಕಳ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಭವಾನಿ ಶಂಕರ್, ಗೋಕುಲ್ ದಾಸ್, ಚೇನತ್ ಕಜೆಗದ್ದೆ, ಆನಂದ ಬೆಳ್ಳಾರೆ ಅವರನ್ನು ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಈ ಆದೇಶ ಮಾಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಪಕ್ಷದ ವಿರುದ್ಧ ಪ್ರಚಾರ ನಡೆಸಿದ ಹಿನ್ನಲೆಯಲ್ಲಿ ಉಚ್ಛಾಟಿಸಲಾಗಿದೆ ಎಂಬ ಮಾಹಿತಿ ಇದೆ.
ಮಾಜಿ ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಸಹಿತ ಮೂವರಿಗೆ ಶೋಕಸ್ ನೋಟಿಸ್ ನೀಡಲಾಗಿದೆ.
ಉಚ್ಚಾಟನೆಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ದೂರು ನೀಡಲಾಗಿದೆ.ಮುಂದಿನ ರಾಜಕೀಯ ಬೆಳವಣಿಗೆ ಕಾದು ನೋಡಬೇಕಾಗಿದೆ.