ಬೊಳುಬೈಲು : ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೊಳುಬೈಲು ಸಮೀಪ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂ ಗೊಂಡ ಘಟನೆ ಜೂ. 22 ರಂದು ರಾತ್ರಿ ವರದಿಯಾಗಿದೆ.ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಪಿಕಪ್ ಹಾಗೂ ಪುತ್ತೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.