ತೊಡಿಕಾನ: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಹೇಮಾನ್ಯ ಕಾಡುಪಂಜ ಏ. 29 ರಂದು ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾಗಿದ್ದಾರೆ.ಹೇಮಾನ್ಯ ಕಾಡುಪಂಜ ಚಿದಾನಂದ ಮತ್ತು ರೂಪಶ್ರೀ ದಂಪತಿಗಳ ಪುತ್ರಿ. ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ಕಲ್ಲುಗುಂಡಿ ಇಲ್ಲಿನ ವಿದ್ಯಾರ್ಥಿಯಾಗಿರುವ ಹೇಮಾನ್ಯ, ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ನ ಹರೀಶ್ ಊರುಬೈಲ್ ಮತ್ತು ಧನ್ಯ ಊರುಬೈಲು ಇವರಿಂದ ತರಬೇತಿ ಪಡೆದಿರುತ್ತಾರೆ .ಹಾಗೂ ಈ ಸಂಸ್ಥೆಯ ಒಟ್ಟು 6 ಮಂದಿ ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.ಪ್ರತಿ ಬಾರಿ ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ನವೋದಯ ಮತ್ತು ಮೊರಾರ್ಜಿ ವಿದ್ಯಾಸಂಸ್ಥೆಗೆ ಆಯ್ಕೆಯಾಗುತ್ತಿದ್ದಾರೆ.ಚೆಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 5ನೇ ತರಗತಿಯಲ್ಲಿ ಹೇಮಾನ್ಯ ವ್ಯಾಸಂಗ ಮಾಡುತ್ತಿದ್ದಾರೆ.
ನವೋದಯ ಪ್ರವೇಶ ಪರೀಕ್ಷೆಯಲ್ಲಿ ಹೇಮಾನ್ಯ ಉತ್ತಿರ್ಣ
