ನವದೆಹಲಿ : ನಟ, ರಾಜಕಾರಣಿ ರವಿಕಿಶನ್ ಪುತ್ರಿ ಇಶಿತಾ ಶುಕ್ಲಾ ಅವರು ಅಗ್ನಿಪಥ ಯೋಜನೆಯಡಿ ಸೇನೆ ಸೇರಿಕೊಂಡಿದ್ದಾರೆ.
ವಿಶೇಷವೆಂದರೆ ಕೇಂದ್ರಸರ್ಕಾರ ರಾಷ್ಟ್ರದ ಯುವಜನತೆಗೆ ದೇಶಸೇವೆ ಸಲ್ಲಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ಅಗ್ನಿಪಥ ಯೋಜನೆ ಅನ್ವಯವೇ ಬಿಜೆಪಿ ನಾಯಕನ ಪುತ್ರಿ ದೆಹಲಿ ಡೈರೆಕ್ಟರೇಟ್‌ನ 7ನೇ ಮಹಿಳಾ ಬೆಟಾಲಿಯನ್ ಭಾಗವಾಗಿ ಭದ್ರತಾಪಡೆ ಸೇರಿದ್ದಾರೆ. 21 ವರ್ಷದ ಈ ಯುವತಿಯ ಆಯ್ಕೆಯನ್ನು ಪ್ರಶಂಸಿಸಿದ್ದಾರೆ.ಮಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ರವಿಕಿಶನ್‌ರನ್ನೂ ಶ್ಲಾ ಘಿಸಿದ್ದಾರೆ
ಸಿನಿಮಾ ತಾರೆಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು ಅದೇ ವೃತ್ತಿಗಳಲ್ಲಿ ಮುಂದುವರಿಯುತ್ತಾರೆ ಹೊರತು, ದೇಶಸೇವೆಗೆ ಮುಂದಾಗಲು ಸಾಧ್ಯವೇ ಇಲ್ಲವೆನ್ನುವಂಥ ಮಾತುಗಳಿತ್ತು.ಅದನ್ನು ಇಶಿತಾ ಶುಕ್ಲಾ ಸುಳ್ಳಾಗಿಸಿದ್ದಾರೆ