ಸುಳ್ಯ ಪೋಲೀಸ್ ವೃತ್ತದ ಗೋವಂಶದ ಬಲಿ ಹತ್ಯೆ ನಿಷೇಧ ಇರುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಗೋಹತ್ಯೆಯಾದರೆ ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಸುಳ್ಯ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೆ ಮನವಿ ಸಲ್ಲಿಸಲಾಗಿದೆ.ಕರ್ನಾಟಕದಲ್ಲಿ ಜಾನುವಾರು ಹತ್ಯೆಯನ್ನು ಪ್ರತಿಕಳಿಸಿ ಸಂರಕ್ಷಣಾ ಕಾಯಿದೆ 2020 ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು, ಹೋರಿ ಕರುಗಳು ) ಗಳ ಬಲಿ ಕುರ್ಬಾನಿ/ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಇದೇ ಜೂನ್ 29, 30, ಜುಲೈ 1 ರಂದು ಕುರ್ಬಾನಿಯ ಸಾಧ್ಯತೆ ಇದ್ದು, ಈ ತಾರೀಕಿನಂದು ಮತ್ತು ಇತರ ದಿನಗಳಲ್ಲಿ ಯಾವುದೇ ರೀತಿಯ ಗೋವಂಶ ವಧೆ (ಬಲಿ/ ಕುರ್ಬಾನಿ/ಹತ್ಯೆ ಹಾಗೂ ಅಕ್ರಮ ಗೋಸಾಗಾಟವಾಗದಂತೆ ತಾವುಗಳು ಕ್ರಮಕೈಗೊಳ್ಳಬೇಕು.ಇದೇ ಸಂದರ್ಭದಲ್ಲಿ ಗೋವುಗಳನ್ನು ಸಾಕುವವರ ಮನೆಯಲ್ಲಿ, ಬೀದಿಗಳಲ್ಲಿ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ಅಹೋ ರಾತ್ರಿ ಗಸ್ತು ಆಗಬೇಕು. ನಾಕಾಬಂದಿ ಹಾಕಬೇಕು. ಜುಲೈ 2 ರ ತನಕ ಯಾರು ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಆ ರೀತಿ ಗೋವಂಶ ತಂದು ಕಟ್ಟಿ ಹಾಕಿದ್ದು ಕಂಡರೆ ತಕ್ಷಣ ಅದಕ್ಕೆ ಪಶು ಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿ, ಫೋಟೋ ತೆಗೆದಿರಿಸಿ ಮಾಲಕರ ಬಳಿ ಮುಚ್ಚಳಿಕೆ ತೆಗೆದುಕೊಳ್ಳಬೇಕು. ಜೂನ್ 3 ರಂದು ಗೋವಂಶಗಳು ಬದುಕಿರುವ ಬಗ್ಗೆ ಅದನ್ನು ಖಾತ್ರಿ ಪಡೆಸಿಕೊಳ್ಳಬೇಕು, ಜೂಲೆ, 3 ರ ಮೊದಲು ದನ ತೀರಿ ಹೋದರೆ ಅದನ್ನು ಹೂಳದೆ ಪೊಲೀಸರಿಗೂ ಮತ್ತು ಪಶು ಸಂಗೋಪನಾ ಇಲಾಖೆಯವರಿಗೆ ತಿಳಿಸಿ ದಫನ ಮಾಡಿದ ಖಾತ್ರಿ ಮಾಡಬೇಕು. ಒಂದು ವೇಳೆ ಜೂಲೈ 3 ರಂದು ಪರಿಶೀಲಿಸುವಾಗ ಆ ಗೋವಂಶಗಳು ಕಂಡು ಬರದಿದ್ದಾಗ ಅವರ ಮೇಲೆ ಗೋಹತ್ಯಾ ಕಾಯಿದೆ 2020 ರ ಪ್ರಕಾರ ಪ್ರಕರಣ ದಾಖಲಿಸಬೇಕು.ಕುರ್ಬಾನಿ ನಿಷೇಧವಿರುವ ಬಗ್ಗೆ, ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ, ನಾವು ದೇವರೆಂದು ಪೂಜಿಸುವ ಗೋವಂಶಕ್ಕೆ ಯಾವುದೇ ರೀತಿಯ ಬಲಿ/ ಕುರ್ಬಾನಿ ಹತ್ಯೆ/ಹಿಂಸೆ ಆದರೆ ಹಿಂದೂ ಸಮಾಜ ಸಹಿಸುವುದಿಲ್ಲ, ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.