ಜನಪ್ರತಿನಿಧಿಗಳು, ಮುಖಂಡರು ಭೇಟಿ: ಸುಳ್ಯ ನಗರ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಜೂ.29ರಂದು ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತಾ ಪ್ರಮುಖರಾದ ಕೆ.ಗೋಕುಲ್‌ದಾಸ್, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಚೇತನ್ ಕಜೆಗದ್ದೆ, ಶಹೀದ್ ಪಾರೆ, ರಾಜು ಪಂಡಿತ್, ನಂದರಾಜ ಸಂಕೇಶ್, ಹರಿಶ್ಚಂದ್ರ ಪಂಡಿತ್, ಭೋಜಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಇಂದಿರಾ ಕ್ಯಾಂಟೀನ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಮುಖಂಡರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸವಿದು ಮರಳಿದರು.ಅಭಿವೃದ್ಧಿ ಬೇಡಿಕೆ ಕುರಿತು ನ.ಪಂ.ಸಭೆಯಲ್ಲಿ ಪ್ರಸ್ತಾಪ: ಇಂದಿರಾ ಕ್ಯಾಂಟೀನ್ ಕಟ್ಟಡದಲ್ಲಿ ನೀರು ಸೋರಿಕೆಯ ಸಮಸ್ಯೆ, ನೀರು ಹರಿದು ಹೋಗದ ಸಮಸ್ಯೆಗಳ ಬಗ್ಗೆ ಸಿಬ್ಬಂದಿಗಳು ನಗರ ಪಂಚಾಯತ್ ಸದಸ್ಯರ ಗಮನಕ್ಕೆ ತಂದರು. ಕಟ್ಟಡವನ್ನು ಚೆನ್ನಾಗಿ ನಿರ್ವಹಿಸುವ ಬಗ್ಗೆ, ಕಟ್ಟಡದ ಎದುರು ಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಸೀಟ್ ಅಳವಡಿಸಿ ಹೆಚ್ಚು ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವ ಬಗ್ಗೆ, ಎದುರಿನ ರಸ್ತೆ ಕಾಂಕ್ರೀಟೀಕರಣ ಮತ್ತಿತರ ಅಭಿವೃದ್ಧಿ ಮತ್ತು ನಿರ್ವಣೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ನಗರ ಪಂಚಾಯತ್ ಗಮನಕ್ಕೆ ತರುವುದಾಗಿ ನ.ಪಂ.ಸದಸ್ಯರಾದ ಎಂ.ವೆಂಕಪ್ಪ ಗೌಡ ಹಾಗೂ ಧೀರಾ ಕ್ರಾಸ್ತಾ ಹೇಳಿದ್ದಾರೆ.