ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಈಗಾಗಲೇ ಅಂತಾರಾಷ್ಟ್ರೀಯ ಟೆನಿಸ್‌ಗೆ ವಿದಾಯ ಹೇಳಿದ್ದರೂ ವಿಂಬಲ್ಡನ್‌ನಲ್ಲಿ ರ್ಯಾಕೆಟ್ ಹಿಡಿದು ಅಂಕಣಕ್ಕೆ ಇಳಿಯಲಿದ್ದಾರೆಹಾಗಾದರೆ ಸಾನಿಯಾ ಮಿರ್ಜಾ ನಿವೃತ್ತಿಯಿಂದ ಹಿಂದೆ ಸರಿದರೇ ಎಂಬುದು ನಿಮ್ಮ ಕುತೂಹಲವೇ? ಇಲ್ಲ, ಸಾನಿಯಾ ಮಿರ್ಜಾ ಆಡುವುದು ಆಮಂತ್ರಿತ ಲೆಜೆಂಡ್ಸ್ ಆಟಗಾರರ ವಿಭಾಗದಲ್ಲಿ. ಇಲ್ಲಿ ಅವರು ಬ್ರಿಟನ್‌ನ ಜೊಹಾನ್ನಾ ಕೊಂಟಾ ಜತೆಗೂಡಿ ಆಡಲಿದ್ದಾರೆ. ಕೊಂಟಾ ಮೊದಲು ಆಸ್ಟ್ರೇಲಿಯವನ್ನು ಪ್ರತಿನಿಧಿಸುತ್ತಿದ್ದರು. 2021ರಲ್ಲಿ ಟೆನಿಸ್‌ಗೆ ವಿದಾಯ ಘೋಷಿಸಿದ್ದರು.4 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಕಿಮ್ ಕ್ಲಿಸ್ಟರ್, ಮಾರ್ಟಿನಾ ಹಿಂಗಿಸ್ ಕೂಡ ಇಲ್ಲಿ ಆಡಲಿದ್ದಾರೆ.