ಅಜ್ಜಾವರ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಗುರುಗಳ ಆಶೀರ್ವಾದದಿಂದ ಜೀವನದಲ್ಲಿ ಸಾಧನೆ ಮಾಡಬಹುದು,ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಗುರುವಿನ ಮೂಲಕ ಪಡೆದ ಶಿಕ್ಷಣ ಶ್ರೇಷ್ಠ ಎಂದು ಆಶ್ರಮದ ಸ್ವಾಮೀಜಿ ಶ್ರೀ ಯೋಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಅವರು ಗುರುಪೂರ್ಣಿಮಾ ಅಂಗವಾಗಿ ಆಶ್ರಮದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರುಆಶ್ರಮದ ಟ್ರಸ್ಟಿ ಸಾಯಿಗೀತಾ ಅಧ್ಯಕ್ಷತೆ ವಹಿಸಿದ್ದರು. ಡಾ.ನಿತೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಆಶ್ರಮದ ಟ್ರಸ್ಟಿ ಪ್ರಣವಿ ಗುರುಪೂರ್ಣಿಮೆಯ ಮತ್ವದ ಬಗ್ಗೆ ತಿಳಿಸಿದರು.ಆಶ್ರಮದ ಟ್ರಸ್ಟಿ ಶಂಕರ್ ಪೆರಾಜೆ,ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಶ್ರಮದ ಟ್ರಸ್ಟಿ ಕುಶಾಲಪ್ಪ ಗೌಡ ಅತ್ಯಾಡಿ ,ಶಶ್ಮಿ ಭಟ್ ,ಮೇಘ ಶ್ಯಾಮ್ ಅಡ್ಪಂಗಾಯ ಇತರರು ಉಪಸ್ಥಿತರಿದ್ದರು.