ಪೆರಾಜೆ ಗ್ರಾಮದ ನಿಡ್ಯಮಲೆ – ಹಾಲೆಕಾಡು ಪ್ರದೇಶದಲ್ಲಿ ಕೃಷಿ ತೋಟಕ್ಕೆ ಹಿಂಡು ಆನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ನಾಶಪಡಿಸಿದ ಘಟನೆ ವರದಿಯಾಗಿದೆ.ಕಳೆದ ಎರಡು ದಿನಗಳಿಂದ ಈ ಭಾಗದ ಕೃಷಿಕರಾದ ಬೆಳ್ಳಿಪ್ಪಾಡಿ ತಿಮ್ಮಪ್ಪ, ಕುಡಿಯರ ಸುಂದರ, ಚಾಮಕಜೆ ಲಿಂಗಯ್ಯ, ಚಾಮಕಜೆ ದುಗ್ಗಪ್ಪ, ಚಾಮಕಜೆ ನಾರಾಯಣ, ಹೊದ್ದೆಟ್ಟಿ ಗೋಪಾಲಕೃಷ್ಣ, ಕುತ್ಯಾಳ ಜನಾರ್ದನ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ಬಂದು ಕೃಷಿ ನಾಶ ಪಡಿಸಿವೆ.ಪಕ್ಕದಲ್ಲೇ ಇರುವ ಕೋಳಿಕ್ಕಮಲೆ ಬೆಟ್ಟದ ಕೆಳ ಭಾಗದ ಕಾಡಿನಿಂದ ಕಾಡಾನೆಗಳು ಆನೆಗಳು ರಾತ್ರಿ ವೇಳೆ ಕೃಷಿ ತೋಟಕ್ಕೆ ನುಗ್ಗುತ್ತಿವೆ ಎಂದು ಹೇಳಲಾಗುತ್ತಿದೆ. ಆನೆಗಳನ್ನು ಓಡಿಸುವ ಪ್ರಯತ್ನ ಊರವರು ಮಾಡುತ್ತಿದ್ದಾರೆ.ಆದರೆ ಮತ್ತೆ ಮತ್ತೆ ಕಾಡಾನೆಗಳು ತೋಟಕ್ಕೆ ಬಂದು ನುಗ್ಗುತ್ತಿವೆ. ಆನೆ ಬರದಂತೆ ತಡೆಯಲು ಶಾಶ್ವತ ಪರಿಹಾರ ಮಾಡಬೇಕಾಗಿದೆ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.