ಹರಿಯಾಣದ ಗುರುಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ.19 ವರ್ಷದ ಯುವತಿಯನ್ನು ರಾಜ್‌ಕುಮಾರ್ (23) ಎಂಬ ಯುವಕ ಆಕೆಯ ತಾಯಿಯ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.ಆಕೆ ಜೊತೆ ನಿಶ್ಚಿತಾರ್ಥವಾಗಿ ಮದುವೆ ನಿಲ್ಲಿಸಿದ್ದರಿಂದ ಕೋಪಗೊಂಡಿದ್ದ ಆತ ಹುಡುಗಿ ಮನೆ ಬಳಿ ಬಂದಿದ್ದ. ಈ ವೇಳೆ ಗಲಾಟೆ ಮಾಡಿ ತಾಯಿ ಎದುರಲ್ಲೇ ಆಕೆಗೆ ಚಾಕು ಇರಿದಿದ್ದಾನೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಇತ್ತ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ನೀಡಲಾಗಿದೆ.