ಮಡಿಕೇರಿ ತಾಲೂಕು ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ತಮ್ಮನಿಂದ ಅಣ್ಣ ಕೊಲೆಯಾದ ಶುಕ್ರವಾರ ವರದಿಯಾಗಿದೆ.ಸತ್ತಾರ್, ರಫೀಕ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ.ಸಂಪಾಜೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.