ರಾಜಸ್ಥಾನದ ಜೈಪುರದ ಮೂರು ಭಾಗಗಳಲ್ಲಿ ಶುಕ್ರವಾರ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೂರು ಕಂಪನಗಳು ಕೇವಲ 30 ನಿಮಿಷಗಳ ಅವಧಿಯಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಶುಕ್ರವಾರ ನಸುಕಿನ ಜಾವಾ 4 ಗಂಟೆಯಿಂದ 4;30 ನಿಮಿಷಗಳ ಅವಧಿಯಲ್ಲಿ ಮೂರು ಕಂಪನಗಳು ಸಂಭವಿಸಿದೆ ಎಂದು ಹೇಳಲಾಗಿದೆ ಅದರಲ್ಲಿ 4.09ರ ಸುಮಾರಿಗೆ 4.4ರ ತೀವ್ರತೆ ಹೊಂದಿದ್ದರೆ, 4.22ರ ಸುಮಾರಿಗೆ 3.1 ರ ತೀವ್ರತೆ ಹಾಗೂ 4.25 ರ ಸುಮಾರಿಗೆ 3.4ರ ತೀವ್ರತೆಯ ಭೂಕಂಪನ ಸಂಭವಿಸಿದೆ.