ವಿಟ್ಲ : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಪರಾರಿಯಾದ ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ.ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಅಬ್ದುಲ್ ಸಮೀರ್ ಎಂಬಾತನ ವಿರುದ್ಧ ಫೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ.ಅಪ್ರಾಪ್ತ ಬಾಲಕಿ ಆರೋಪಿ ಅಬ್ದುಲ್ ಸಮೀರ್‌ನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಪ್ರೀತಿಸುತ್ತಿದ್ದು ಬಳಿಕ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಬಾಲಕಿನ ಮನೆಯ ಸಮೀಪದ ನಿರ್ಮಾಣ ಹಂತದ ಮನೆಯೊಂದ್ರ ಬಳಿ 2019ನೇ ಇಸವಿಯ ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿರುತ್ತಾನೆ.ಆಪಾದಿತ ಅಬ್ದುಲ್ ಸಮೀರನು ಬಾಲಕಿ ಅಪ್ರಾಪ್ತಳಾಗಿದ್ದ ವಯಸ್ಸಿನಲ್ಲಿ ಮದುವೆಯಾಗುತ್ತೇನೆಂದು ಹೇಳಿ ಆಕೆಗೆ ಮೊಬೈಲ್‌ನ್ನು ಕೊಟ್ಟು ನಂಬಿಸಿ ಅತ್ಯಾಚಾರವೆಸಗಿ ಮದುವೆಯಾಗದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 119/2023 ಕಲಂ:5(L), (N), 6 ಫೋಕ್ಸೊ ಕಾಯ್ದೆ 2012 ಮತ್ತು ಕಲಂ:376 (2) (f) ,(n), 420 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.