ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿ ನಡೆದಿದೆ.ಉಪ್ಪಿನಂಗಡಿ ಗ್ರಾಮ ಪುತ್ತೂರು ನಿವಾಸಿ ಬಿ.ಕೆ ಅಬ್ದುಲ್ ರಹೀಮಾನ್ ಎಂಬವರು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿ ಕೆ.ಜಿ.ಎನ್ ಜನರಲ್ ಸ್ಟೋರ್ ಹೊಂದಿದ್ದು, ವ್ಯಾಪಾರ ಮಾಡಿಕೊಂಡಿದ್ದಾಗ, ಪರಿಚಯ ಇರುವ ಆರೋಪಿ ಜಕಾರಿಯ ಎಂಬುವರು ಏಕಾಏಕಿಯಾಗಿ ಅಂಗಡಿ ಒಳಗಡೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದು, ಈ ವೇಳೆ ಇತರ ಆರೊಪಿಗಳಾದ ಹಮೀದ್, ರಫಿಕ್, ಅನ್ಸಾಫ್ ಎಂಬವರುಗಳು ಮರದ ದೊಣ್ಣೆಗಳೊಂದಿಗೆ ಹಲ್ಲೆ ನಡೆಸಲು ಬಂದಾಗ ಸಾರ್ವಜನಿಕರು ತಡೆದಿದ್ದು, ಆರೋಪಿಗಳೆಲ್ಲ ಸೇರಿ ಅಬ್ದುಲ್ ರಹೀಮಾನ್ ಎಂಬವರಿಗೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಕೊಂದು ಮುಗಿಸುವುದಾಗಿ ಬೆದರಿಕೆ ಹಾಕಿ ತೆರಳಿರುತ್ತಾರೆ . ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 137/2023 ಕಲಂ: 448,324,323,506 ಜೊತೆಗೆ 34 ಭಾ.ದಂ.ಸಂ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.