ಸುಳ್ಯ : ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡುವುದಾಗಿ ಹೇಳಿ ಅಮರಪಡ್ನೂರಿನ ನಿವಾಸಿಯೋರ್ವರಿಗೆ ವಂಚಿಸಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆ ಬಿ ಎಂಬವರ ದೂರಿನಂತೆ ಇವರಿಗೆ ಜು.15, 2023 ರಂದು ಅಪರಿಚಿತ ವ್ಯಕ್ತಿಯಬ್ಬರು ಕರೆಮಾಡಿ ತಾನು Vistara Airlines , Singapore Branch, Devanahalli Bangalore ಎಂಬ ಸಂಸ್ಥೆಯಿಂದ ಕರೆಮಾಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿರುತ್ತಾರೆ. ಉದ್ಯೋಗವನ್ನು ನೀಡುವುದಾಗಿ ತಿಳಿಸಿ, ಇವರಿಂದ ಹಂತ ಹಂತವಾಗಿ ವಿವಿಧ ನೆಪಗಳನ್ನು ಹೇಳಿ ಒಟ್ಟು ರೂ 13,00,997 /- ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಈವರೆಗೆ ಉದ್ಯೋಗ ನೀಡದೇ ಮೋಸ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.