ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಬಾಲಕೃಷ್ಣ ಬಿ.ವಿ.ತೊಡಿಕಾನರವರ ಮಾಲಕತ್ವದ ನ್ಯೂ ಮಲ್ಲಿಕಾ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಹಾಗೂ ಶ್ರೀ ಮಲ್ಲಿಕಾ ಸ್ಟಾಲ್ ನ.22 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಣಹೋಮ ನಡೆಯಿತು.
ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರು ಪ್ರಥಮ ಗ್ರಾಹಕರಾಗಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು. ಇಲ್ಲಿ ಜ್ಯೂಸ್ ಹಾಗೂ ಎಲ್ಲಾ ಬಗೆಯ ಶುಚಿರುಚಿಯಾದ ಬೇಕರಿ ಐಟಂಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.