ಡಿಸೆಂಬರ್ 31ಕ್ಕೆ ಕೊಡಿಯಾಲದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಲ್ಪಡ ಕೊಡಿಯಾಲ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸೀಯೇಶನ್ ಇವರ ಸಹಭಾಗಿತ್ವದಲ್ಲಿ ಪುರುಷರ 62 ಕೆ.ಜಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಡಿ. 31 ರಂದು ಕೊಡಿಯಾಲ ಮೂವಪ್ಪೆ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.ಈ ಕ್ರೀಡಾಕೂಟದ ಬಗ್ಗೆ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಬಿ.ಕೆ.ಮಾಧವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ಳಾರೆಯ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮರಕ್ಕಡ, ಬೆಳ್ಳಾರೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಅನಿಲ್‌ ರೈ ಚಾವಡಿಬಾಗಿಲು, ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎ.ಸಿ.ವಸಂತ, ಕೊಡಿಯಾಲ ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರಾ ದಿನೇಶ್, ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಶಿಕ್ಷಕಿ ಪುಷ್ಪಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಬೆಳ್ಳಾರೆ ಸೊಸೈಟಿ ನಿರ್ದೇಶಕ ಸುಂದರ ಗೌಡ ಪೋಳಾಜೆ, ಪದ್ಮಯ್ಯ ಗೌಡ ತೋಟ ಕಲ್ಪಡ, ಲಕ್ಷ್ಮಣ ಗೌಡ ಕಣಿಲೆಗುಂಡಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾರೋಪದಲ್ಲಿ ಸಮಾರಂಭವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ಕಾಣಿಯೂರು ಮಠದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿರಂಜನ್ ಆಚಾರ್, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಹರ್ಷನ್ ಕೆ.ಟಿ, ಕೊಡಿಯಾಲ ಗ್ರಾ.ಪಂ. ಪಿಡಿಒ ಪ್ರವೀಣ್ ಕುಮಾ‌ರ್, ಭಾರತೀಯ ರೈಲ್ವೆ ಉದ್ಯೋಗಿ ಪುರಂದರ. ಕೆ, ಹರೀಶ್‌ ಪೈಕ, ಶಿಕ್ಷಕಿ ನಿರ್ಮಲ ಕೆ.ಎನ್, ಪ್ರಶಾಂತ್ ಅಂಬುಲ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಮ್ ಏನೆಕಲ್ಲು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ‘ನಮ್ಮರಿನ ರತ್ನ’ ನೀಡಿ ಸನ್ಮಾನಿಸಲಾಗುವುದು. ಅಲ್ಲದೇ ನಿವೃತ್ತ ಸೈನಿಕ ಲೊಕೇಶ್ ಕಂಡೂರು, ಸಂಶೋಧನಾ ಪ್ರಾಚಾರ್ಯ ದೇವಿದಾಸ್ ಪೈ ಬಾಚೋಡಿ, ಸಹಕಾರ ಕ್ಷೇತ್ರದ ಈಶ್ವರ ಆಳ್ವ ಆನಂದ ನಾಯಕ್, ಉದ್ಯಮಿ ಚಂದ್ರಶೇಖರ್, ಪ್ರಗತಿ ಪರ
ಕೊಡಿಯಾಲ, ಕ್ರೀಡಾಪಟುಗಳಾದ ಚರೀಷ್ಮಾ, ವಿಜಯ ಕುಮಾರಿ ಪೊಟ್ರೆ, ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿ ಉತ್ತಮ ಗುಂಡಿಗದ್ದೆ, ಯೋಗಪಟು ಪ್ರಣಮ್ಯ ಅಗಳಿ ಇವರುಗಳಿಗೆ ಸನ್ಮಾನ ನಡೆಯಲಿದೆ.ಈ‌ ಸಂದರ್ಭದಲ್ಲಿ
ಕೆಎಸ್‌ಆರ್‌ಟಿಸಿ ಉದ್ಯೋಗಿಗಳಾದ ಲಿಂಗಪ್ಪ ಅನಿಲ, ನವೀನ್ ಚಂದ್ರ ಪೆರ್ಲೋಡಿ, ನಾಟಿ ವೈದ್ಯ ದಿನೇಶ್ ಮಾಳ, ಭತ್ತ ಕೃಷಿಕ ದೇವಣ್ಣ ಗೌಡ, ಮೆಸ್ಕಾಂ ಇಲಾಖೆಯ ಭವಿತ್ ಖಂಡಿಗ, ಆರೋಗ್ಯ ಸಂರಕ್ಷಣಾಧಿಕಾರಿ ರೇಷ್ಮಾ ಕೆ.ಬಿ, ಆಶಾ ಕಾರ್ಯಕರ್ತೆಯರಾದ ರಾಜೀವಿ ನಾಯಕ್, ಚಂದ್ರಾವತಿ, ರತ್ನಾವತಿ ಇವರಿಗೆ ಸನ್ಮಾನ ನಡೆಯಲಿದೆ. ವಿದ್ಯಾರ್ಥಿಗಳಾದ ಅನುಷಾ ಎ.ಸಿ, ಶ್ರೇಯಾ ಅಗಳಿ, ಯಶೋಧ ಕೆ, ಭವಿಷ್ಯ ಕೆ, ಕಾರ್ತಿಕ್ ಕೆ ಮತ್ತು ಧನಲಕ್ಷ್ಮಿ ಸಿ.ಎಂ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಪಂದ್ಯಾಟದಲ್ಲಿ ಪ್ರಥಮ ಬಹುಮಾನ 0.15,555 & 3. 12,222, ತೃತೀಯ 6,666, ಚತುರ್ಥ 5000 ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶಾಶ್ವತ ಫಲಕಗಳನ್ನು ನೀಡಲಾಗುವುದು, ಅಲ್ಲದೇ ಪಂದ್ಯಾಟದ ಸವ್ಯಸಾಚಿ ಪ್ರಶಸ್ತಿ, ಉತ್ತಮ ದಾಳಿಗಾರ ಪ್ರಶಸ್ತಿ, ಉತ್ತಮ ಹಿಡಿತಗಾರ ಪ್ರಶಸ್ತಿ ನೀಡಲಾಗುವುದು ಎಂದು ಸುಬ್ರಹ್ಮಣ್ಯ ಕೆ.ಎಂ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಹರ್ಷನ್ ಕೆ.ಟಿ, ದೈಹಿಕ ಶಿಕ್ಷಕ ಎ.ಸಿ.ವಸಂತ, ಜತೆ ಕಾರ್ಯದರ್ಶಿ ಗಣೇಶ್ ಪೆರ್ಲೊಡಿ, ಸದಸ್ಯರಾದ ಅಶ್ವಿನ್ ಕುಮಾರ್, ನವೀನ್ ಕೊಡೆಂಕಿರಿ, ಕೇಶವ ಕೆ.ಪಿ, ನವೀನ್ ಖಂಡಿಗ ಉಪಸ್ಥಿತರಿದ್ದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top