ಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಅದ್ದೂರಿ ಚಾಲನೆ

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅರ್ಥ ಮಾಡಿಕೊಂಡರೆ ಭಾರತಕ್ಕೆ ಶ್ರೇಷ್ಠ ಯುವ ಜನಾಂಗವನ್ನು ನೀಡಬಹುದು

Ad Widget . Ad Widget . Ad Widget . . Ad Widget . . Ad Widget .

ಸುಳ್ಯ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅರ್ಥ ಮಾಡಿಕೊಂಡರೆ ಭಾರತಕ್ಕೆ ಶ್ರೇಷ್ಠ ಯುವ ಜನಾಂಗವನ್ನು ನೀಡಬಹುದು
ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮೂರು ದಿನಗಳ ಕಾಲ ನಡೆಯುವ ಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆ, ಅನುದಾನಿತ ಶಾಲೆ ಎಂಬ ತಾರತಮ್ಯ ಬದಲಾಗಬೇಕಾಗಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಮಾನವಾದ ರೀತಿಯ ಅನುದಾನ, ಸೌಕರ್ಯ ಹಂಚಿಕೆಯಾಗಬೇಕು. ಈ ಹಿನ್ನಲೆಯಲ್ಲಿ ಸರಕಾರದ ಗಮನ ಸೆಳೆಯುತ್ತೇನೆ .ಅನುದಾನಗಳು ಎಲ್ಲಾ ಸರಕಾರಿ, ಅನುದಾನಿತ ಶಾಲೆಗೆ ಸಮಾನಾಗಿ ಹಂಚಿಕೆಯಾಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಗುಣಮಟ್ಟದ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದ್ದರೂ ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿಲ್ಲ. ಶ್ರೇಷ್ಠ ಪ್ರಜೆ ಹಾಗೂ ರಾಷ್ಟ್ರ ಭಕ್ತರನ್ನು ಸೃಷ್ಟಿಸುವ ಶಿಕ್ಷಣ ಅಗತ್ಯ ಎಂದು ಅವರು ಹೇಳಿದರು.
ಸುವರ್ಣ ಮಹೋತ್ಸವ
ಸುವರ್ಣ ಜ್ಯೋತಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಮಾತನಾಡಿ ಪಠ್ಯ ಪುಸ್ತಕ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲದು ಎಂದು ಹೇಳಿದರು. ಕಾಲ ಕಾಲಕ್ಕೆ ಸೂಕ್ತವಾದ ಸಮಷ್ಠಿಯ, ಸಮಗ್ರ ಶಿಕ್ಷಣ, ಸಂಸ್ಕಾರ ನೀಡುವ ಪಠ್ಯ ಹಾಗೂ ಶಿಕ್ಷಣ ಬೇಕಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ನಾಡನ್ನು ಕಟ್ಟುವ, ಒಡೆದ ಮನಸ್ಸನ್ನು ಒಟ್ಟಾಗಿಸುವ, ಸಾಮರಸ್ಯದ, ಶಾಂತಿಯ ಬದುಕನ್ನು ಕೊಡುವ ಶಿಕ್ಷಣ ನೀಡಬೇಕಾಗಿದೆ ಎಂದು ಅವರು ಹೇಳಿದರು.

. Ad Widget . Ad Widget . Ad Widget


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ ‘ಶಿಕ್ಷಣ ಪದ್ದತಿಯಲ್ಲಿ ಸರಕಾರಗಳು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಗೊಂದಲ ಉಂಟಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ನೀತಿಯ ಬಗ್ಗೆ ಚಿಂತಿಸುವ ಕೆಲಸ ಅತ್ಯಗತ್ಯ . ರಾಜಕೀಯವನ್ನು ಮೆಟ್ಟಿನಿಂತ್ತು ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆ ಯನ್ನು ರೂಪಿಸುವ ಕೆಲಸ ಆಗಬೇಕಿದೆ ಎಂದರು.
ಆಶಯ ಭಾಷಣ ಮಾಡಿದ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ ಈ ಶಾಲೆಯಲ್ಲಿ ಸಾಕಾಷ್ಟು ಕೆಲಸಗಳು ಆಗಿವೆ.ಇದಕ್ಕೆ ಅಂಗಾರರು ಕಾರಣ ಶಾಲೆಯ ಉಳಿವಿಗೆ, ಊರಿನ ಜನರ ಪ್ರಯತ್ನ ಬೇಕಾಗಿದೆ ಜೊತೆಗೆ ಆತ್ಮಾವಲೋಕನ ಮಾಡಬೇಕಾಗಿದೆ ಎಂದರು.
ಬೆಂಗಳೂರು ಕಿವಾನಿ ಇಂಟರ್ ನ್ಯಾಶನಲ್ ಗ್ರೂಪ್‌ನ ನಿರ್ದೇಶಕ ರಾಜಣ್ಣ ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ ಪೈಲಾರು ಅತಿಥಿಗಳಾಗಿದ್ದರು.
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ಚೊಕ್ಕಾಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಯು. ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್‌ ಮಾಯಿಪಡ್ಕ, ಶಾಲಾ ವಿದ್ಯಾರ್ಥಿ ನಾಯಕ ಅಭಿಜಿತ್ ಕೆ, ವಿದ್ಯಾರ್ಥಿ ನಾಯಕಿ ಹಸ್ತಾ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಂಧ್ಯಾಕುಮಾರಿ ಸ್ಮರಣ ಸಂಚಿಕೆಯ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು ವಂದಿಸಿದರು. ದಯಾನಂದ ಪತ್ತುಕುಂಜ ಹಾಗೂ ಸೋಮಶೇಖರ ಹಾಸನಡ್ಕ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿ ಗಳಿಂದ ಮನರಂಜನಾ ಕಾರ್ಯಕ್ರಮ ನಡೆದವು.

Leave a Comment

Your email address will not be published. Required fields are marked *

error: Content is protected !!
Scroll to Top